Ad Widget .

ಇಂದು ಪರಮಾತ್ಮನ ಎರಡನೇ ಪುಣ್ಯಸ್ಮರಣೆ

ಸಮಗ್ರಸಮಾಚಾರ: ದೊಡ್ಮನೆ ಯುವರತ್ನ ಪುನೀತ್ ರಾಜ್‍ಕುಮಾರ್ ಸಂಪಾದಿಸಿದ ಪ್ರೀತಿ,ಗೌರವ, ಅಭಿಮಾನ ಅಷ್ಟಿಷ್ಟಲ್ಲ ತಂದೆಯನ್ನೆ ಮೀರಿಸಿದ ಮಗ ಅನ್ನೋ ಮಾತಿಗೆ ಇದೇ ನಿದರ್ಶನ. ಆದರೆ ಅಪ್ಪು ಈ ರೀತಿಯಾಗಿ ವಿದಾಯ ಹೇಳುತ್ತಾರೆ ಎಂದು ಯಾರು ಊಹಿಸಿರಲಿಲ್ಲ.

Ad Widget . Ad Widget .

ಅಕ್ಟೋಬರ್ 29 ಅಪ್ಪು ಮರೆಯಾದ ದಿನ. ಅಪ್ಪು ಅಗಲಿಕೆಗೆ ಇಡೀ ಕರುನಾಡೆ ಶೋಕಸಾಗರದಲ್ಲಿ ಮುಳುಗಿತ್ತು. ಇದೀಗ ಎರಡನೇ ವರ್ಷದ ಪುಣ್ಯ ಸ್ಮರಣೆ ಇಂದು. ಅದರೆ ಪುನೀತ್ ಅಭಿಮಾನಿಗಳಂತು ಕಡಿಮೆಯಾಗಿಲ್ಲ. ಕಂಠೀರವ ಸ್ಟುಡಿಯೋದಲ್ಲಿ ಎಲ್ಲ ಸಿದ್ದತೆಗಳು ನಡೆದಿದ್ದು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅಪ್ಪು ಮಲಗಿರೋ ಜಾಗದಲ್ಲಿ ಈಗ ಸ್ಮಾರಕ ನಿರ್ಮಾಣವಾಗಿದೆ. ಪರಮಾತ್ಮನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ದೊಡ್ಮನೆ ಕುಟುಂಬದವರಿಂದ ಕಾರ್ಯವೂ ನೆರವೇರಲಿದೆ.

Ad Widget . Ad Widget .

ಪುನೀತನಿಲ್ಲದ ಈ ಕ್ಷಣ ನಂಬಲಸಾಧ್ಯ. ಕರುನಾಡ ಚರಿತ್ರೆಯಲ್ಲಿ ಶಾಶ್ವತವಾಗಿ ಅಚ್ಚೊತ್ತಿದವರೂ ಅಪ್ಪು. ಅಪ್ಪು ಮೆರವಣಿಗೆಗಳು, ಸ್ಮಾರಕಗಳು, ಕಾರ್ಯಕ್ರಮಗಳು ಇಂದಿಗೂ ನಡೆಯುತ್ತಿವೆ. ನಾಡಿನಾದ್ಯಂತ ದೇವರಾಗಿ ಆರಾಧಿಸುತ್ತಿದ್ದಾರೆ. ಅಪ್ಪು ಜೀವಂತವಾಗಿರುವಾಗ ಸಿಗೋ ಗೌರವಕ್ಕಿಂತ ಹತ್ತು ಪಟ್ಟು ಹೆಚ್ಚಾಗಿ ಈಗ ಗೌರವ ಸಿಗುತ್ತಿದೆ.

Leave a Comment

Your email address will not be published. Required fields are marked *