ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ನ ಮರುತನಿಖೆಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಆದ್ರೆ, ಮರು ತನಿಖೆಗೆ ರಾಜ್ಯ ಸರ್ಕಾರ ನಿರುತ್ಸಾಹ ತೋರಿದ್ದು, ಪ್ರಕರಣ ಕೈ ಚೆಲ್ಲಿದೆ.
ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಪ್ರಕರಣ ಸಂಬಂಧ ನಾವೇನೂ ಮಾಡಲಿಕ್ಕಾಗುವುದಿಲ್ಲ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದರು.
ಸಿಬಿಐನವರು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದಾರೆ. ಏನಿದ್ದರೂ ಕೇಂದ್ರ ಸರ್ಕಾರದವರು ಮಾಡಬೇಕು. ನಾವೇನೂ ಮಾಡಲಾಗುವುದಿಲ್ಲ ಎಂಬ ಸ್ಪಷ್ಟನೆ ನೀಡುವ ಮೂಲಕ ಮರುತನಿಖೆ ಇಲ್ಲ
ಎಂಬ ಸ್ಪಷ್ಟ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯರ ಫೋಟೋದ ಮುಂದೆ ಕಲೆಕ್ಷನ್ ಮಾಸ್ಟರ್ ಅಂತ ಬೋರ್ಡ್ ಹಾಕಿದ್ದಂಥ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಅವನಿನ್ನೂ ರಾಜಕೀಯ ಬಚ್ಚಾ ಎಂದು ಛೇಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹರೀಶ್ ಪೂಂಜಾ ಎಂಎಲ್ ಎ ಆಗಿದ್ದು ಮೊನ್ನೆ. ಬಿಜೆಪಿ ಸರ್ಕಾರಕ್ಕೆ, ಆಗಿನ ಪಕ್ಷದ ಮುಖ್ಯಮಂತ್ರಿಗೆ ಹೇಳಬೇಕು ಎಂದರು.
ಅವನಿನ್ನೂ ರಾಜಕೀಯದಲ್ಲಿ ಬಚ್ಚಾ. ನಿನ್ನೆ ಮೊನ್ನೆ ಶಾಸಕನಾಗಿರುವುದು. ನಾನು 1983ರಲ್ಲಿಯೇ ಶಾಸಕನಾಗಿದ್ದೆ. 1985ರಲ್ಲಿ ಮಂತ್ರಿಯಾಗಿದ್ದೆ. ಬಿಜೆಪಿ ನಾಯಕರಿಗೆ ಕಲೆಕ್ಷನ್ ಮಾಸ್ಟರ್ಸ್ ಅಂತಾ ಹೇಳಲಿ. ಇದರಲ್ಲಿ ಬಿಜೆಪಿಯವರು ನಿಪುಣರು. ಅದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿಳಿಸಿದರು.