Ad Widget .

ಮನೆ ಬಿಟ್ಟು ಹೋದ ತಂದೆಯ ಕಾರಣ ಖಿನ್ನತೆಗೊಳಗಾದ ಮಗ| ವೇದನೆ ಸಹಿಸದೆ ಆತ್ಮಹತ್ಯೆಗೈದ ಪುತ್ರ|

ಸಮಗ್ರ ನ್ಯೂಸ್: ಒಣಗಿದ ಅಡಕೆ ರಾಶಿ ಮಧ್ಯೆ ಯುವಕನ ಅರೆಬೆಂದ ಮೃತದೇಹ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಆಚಳ್ಳಿ ನಿವಾಸಿ ಸಿರಿಯಾಕ್ ಮ್ಯಾಥ್ಯ ಎಂಬವರ ಪುತ್ರ ಸೈಬಿನ್ ಮೃತರು. ಮೃತದೇಹ ಅರೆಬೆಂದ ರೀತಿಯಲ್ಲಿ ಮನೆಯ ಕೊಟ್ಟಿಗೆಯಲ್ಲಿ ಶುಕ್ರವಾರ(ಅ.27) ಮಧ್ಯಾಹ್ನದ ವೇಳೆಗೆ ಪತ್ತೆಯಾಗಿತ್ತು.

Ad Widget . Ad Widget .

ಈ ಮಧ್ಯೆ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದ ಸೈಬಿನ್ ತಂದೆ ಸಿರಿಯಾಕ್ ಮ್ಯಾಥ್ಯೂ ಗುತ್ತಿಗಾರಿಗೆ ಬಂದಿರುವುದಾಗಿ ತಿಳಿದುಬಂದಿದೆ

Ad Widget . Ad Widget .

ಸಿರಿಯಾಕ್ ಮಾಥ್ ಅವರು 3 ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಇದರಿಂದ ಸೈಬಿನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ತಂದೆ ಮನೆಬಿಟ್ಟು ಹೋದ ಪ್ರಕರಣದಲ್ಲಿ ತನ್ನನ್ನು ಸಮಾಜ ಅಪರಾಧಿಯಂತೆ ನೋಡುತ್ತಿರುವುದಾಗಿ ಅವರು ಕೆಲವರಲ್ಲಿ ಹೇಳಿಕೊಂಡಿದ್ದನಂತೆ. ಸಬಿನ್ ಅವರ ಪತ್ನಿ ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಅವರೊಬ್ಬರೇ ಇದ್ದರು.

ಮೃತ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಮೃತದೇಹ ಬಂದ ಬಳಿಕ ಗುತ್ತಿಗಾರು ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿರಿಯಾಕ್ ಮ್ಯಾಥ್ಯ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಲು ಅಸಲಿ ಕಾರಣ ಏನೂ ಎಂದು ತಿಳಿದು ಬಂದಿಲ್ಲ. ಆದರೆ ತಂದೆ ಮನೆ ಬಿಟ್ಟು ಹೋದ ಬಳಿಕ ಮಗ ಖಿನ್ನತೆಗೆ ಒಳಗಾಗಿದ್ದಾಗಿ ಹೇಳಲಾಗಿದೆ.

Leave a Comment

Your email address will not be published. Required fields are marked *