Ad Widget .

ಮಡಿಕೇರಿ: ಖಾಸಗಿ ವಾಹನಕ್ಕೆ ಪೊಲೀಸ್ ಫಲಕ|ಅಮಾಯಕರ ಮೇಲೆ ನಕಲಿ ಪೊಲೀಸನಿಂದ ಹಲ್ಲೆ|

ಮಡಿಕೇರಿ: ನಾಡ ಹಬ್ಬ ದಸರಾ ಸಂದರ್ಭದಲ್ಲಿ, ಕೆಲವು ಪುಂಡರು ಖಾಸಗಿ ವಾಹನದ ಮುಂಭಾಗದ ಗಾಜಿಗೆ ಪೊಲೀಸ್ ಇಲಾಖೆಯ ವಾಹನದಂತೆ ದಪ್ಪ ಅಕ್ಷರಗಳಲ್ಲಿ ಪೊಲೀಸ್ ಎಂದು ಬರೆದುಕೊಂಡು ಬಂದಿದ್ದರು.

Ad Widget . Ad Widget .

ಈ ಸಂದರ್ಭದಲ್ಲಿ ಇಬ್ಬರು ಅಮಾಯಕ ಯುವಕರ ಮೇಲೆ ಮಾರಾಣಂತಿಕ ಹಲ್ಲೆ ನಡೆಸಿದ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು. ಈ ವ್ಯಕ್ತಿಯು ರಾಜಾರೋಷವಾಗಿ ಪೊಲೀಸ್ ಬೋರ್ಡ್ ಹಾಕಿಕೊಂಡು ವಾಹನದಲ್ಲಿ ಮಡಿಕೇರಿಯ ರಾಜಬೀದಿಯಲ್ಲಿ ತಿರುಗಿಕೊಂಡಿದ್ದರೂ ಯಾವುದೇ ಪೊಲೀಸರು ಈತನನನ್ನು ತಡೆದು ಪ್ರಶ್ನೆ ಮಾಡದಿರುವುದು ಅನುಮಾನಕ್ಕೆ ಎಡೆಮಾಡಿದೆ.

Ad Widget . Ad Widget .

ಅಲ್ಲದೇ ಹಲ್ಲೆಗೆ ಒಳಗಾದ ಮಡಿಕೇರಿಯ ಇಬ್ಬರು ಯುವಕರಿಬ್ಬರಿಗೆ ಪ್ರಕರಣ ದಾಖಲಿಸದಂತೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹೇಳಲಾಗಿದೆ. ಇನ್ನಾದರೂ ಪೊಲೀಸ್ ಇಲಾಖೆಯವರು ಈತನ ಮೇಲೆ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *