Ad Widget .

ಡಬಲ್ ಬಂಗಾರಕ್ಕೆ ಗುರಿಯಿಟ್ಟ ತೋಳಿಲ್ಲದ ಮಹಿಳೆ| ವಿಶ್ವವನ್ನೇ ಭಾರತದತ್ತ ತಿರುಗಿಸಿದ ಶೀತಲ್ ದೇವಿ

ಸಮಗ್ರ ನ್ಯೂಸ್:ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ 16 ವರ್ಷ ಶೀತಲ್ ದೇವಿ ವಿಶ್ವದ ಮೊದಲ ತೋಳಿಲ್ಲದ ಮಹಿಳಾ ಬಿಲ್ಲುಗಾರ್ತಿಯಾಗಿದ್ದು, ಈ ಬಾರಿ 2 ಚಿನ್ನ ಸೇರಿ ಮೂರು ಪದಕ ಗೆದ್ದಿದ್ದಾರೆ.

Ad Widget . Ad Widget .

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಲೋಯಿಧಾರ್ ಗ್ರಾಮದ 16 ವರ್ಷದ ಬಿಲ್ಲುಗಾರ್ತಿ ಶೀತಲ್ ದೇವಿ, ವಿಶ್ವದ ಮೊದಲ ತೋಳಿಲ್ಲದ ಮಹಿಳಾ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹುಟ್ಟುತ್ತಲೇ ಫೋಕೊಮೆಲಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಅಪರೂಪದ ಕಾಯಿಲೆಯಲ್ಲಿ ದೇಹದ ಕೆಲವು ಅಂಗಗಳು ಬೆಳೆಯುವುದೇ ಇಲ್ಲ ಅದರಂತೆ ಇವರು ಕೈಗಳಿಲ್ಲದೆ ಹುಟ್ಟಿದ್ದಾರೆ.

Ad Widget . Ad Widget .

“ಆರಂಭದಲ್ಲಿ ನನಗೆ ಸರಿಯಾಗಿ ಬಿಲ್ಲು ಎತ್ತಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಒಂದೆರಡು ತಿಂಗಳ ಅಭ್ಯಾಸದ ನಂತರ ಅದು ಸುಲಭವಾಯಿತು” ಎಂದು ಶೀತಲ್ ಗುರುವಾರ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಬಿಲ್ಲುಗಾರಿಕೆ ವಿಭಾಗದಲ್ಲಿ ತನ್ನ ಕಾಲುಗಳನ್ನು ಬಳಸಿ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಮತ್ತು ಬೆಳ್ಳಿಯನ್ನು ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ.

ತೋಳುಗಳಿಲ್ಲದ ಬಿಲ್ಲುಗಾರ್ತಿಯಾಗಿರುವ ಶೀತಲ್ ದೇವಿ ವಿಶ್ವದಲ್ಲಿ ತಮ್ಮ ಪಾದಗಳಿಂದ ಶೂಟ್ ಮಾಡಿದ ಏಕೈಕ ಪ್ರಸ್ತುತ ಮಹಿಳಾ ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿ, ಮಹಿಳೆಯರ ಡಬಲ್ಸ್ ಕಾಂಪೌಂಡ್‌ನಲ್ಲಿ ಬೆಳ್ಳಿಯ ನಂತರ, ಶೀತಲ್ ಮಿಶ್ರ ಡಬಲ್ಸ್ ಮತ್ತು ಮಹಿಳೆಯರ ವೈಯಕ್ತಿಕ ವಿಭಾಗದಿಂದ ಎರಡು ಚಿನ್ನದ ಪದಕಗಳನ್ನು ಸೇರಿಸಿದರು.

ಅ. 27ರಂದು ಬೆಳಿಗ್ಗೆ, ಪ್ಯಾರಾ ಏಷ್ಯನ್ ಗೇಮ್ಸ್‌ನ ಫೈನಲ್‌ನಲ್ಲಿ ಸಿಂಗಾಪುರದ ಅಲಿಮ್ ನೂರ್ ಸೈಹಿದಾ ವಿರುದ್ಧ ಜಯಗಳಿಸುವ ಮೂಲಕ ಅವರು ಮಹಿಳಾ ಕಾಂಪೌಂಡ್‌ನಲ್ಲಿ ಚಿನ್ನ ಗೆದ್ದರು. ಕೇವಲ ಎರಡು ವರ್ಷಗಳ ಹಿಂದೆ ಬಿಲ್ಲು-ಬಾಣದೊಂದಿಗೆ ತನ್ನ ತರಬೇತಿಯನ್ನು ಪ್ರಾರಂಭಿಸಿದ ಅವರು ಇದೀಗ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ.

Leave a Comment

Your email address will not be published. Required fields are marked *