ಸಮಗ್ರ ನ್ಯೂಸ್: ಹುಲಿ ಉಗುರನ್ನು ಹೋಲುವ ಲಾಕೆಟ್ ಧರಿಸಿದ್ದ ನಗರ ಪಂಚಾಯತ್ ಉದ್ಯೋಗಿ ಫೋಟೋ ವೈರಲ್ ಆಗಿ ಅರಣ್ಯ ಇಲಾಖೆ ಅಧಿಕಾರಿಗಳು ಲಾಕೆಟ್ ಪಡೆದುಕೊಂಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ನಗರ ಪಂಚಾಯತ್ ಉದ್ಯೋಗಿ ಶಶಿಕಲಾ ಎಂಬವರು ಹುಲಿ ಉಗುರನ್ನು ಹೋಲುವ ಲಾಕೆಟ್ ಧರಿಸಿದ್ದ ಫೋಟೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ಅರಣ್ಯ ಇಲಾಖೆ ಅಧಿಕಾರಿಗಳಿಂದ ಶಶಿಕಲಾ ಸೂಚನೆ ನೀಡಲ್ಪಟ್ಟಿದ್ದು, ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಶಶಿಕಲಾ ಲಾಕೆಟ್ ಹಸ್ತಾಂತರಿಸಿದ್ದಾರೆ.
ಲಾಕೆಟ್ ನಲ್ಲಿರುವುದು ನೈಜ ಹುಲಿ ಉಗುರು ಅಲ್ಲ ಬದಲಾಗಿ ತಮ್ಮ ತಾಯಿ ಮಾರಾಟಗಾರರಿಂದ ಖರೀದಿ ಮಾಡಿರುವುದಾಗಿ ಶಶಿಕಲಾ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಲಾಕೆಟ್ ಪಡೆದುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ ಎಸ್ ಎಲ್ ಲ್ಯಾಬ್ ಪರೀಕ್ಷೆಗೆ ಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.