Ad Widget .

ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣ| ಅರಣ್ಯಾಧಿಕಾರಿ ದರ್ಶನ್‌ ಅರೆಸ್ಟ್

ಸಮಗ್ರ ನ್ಯೂಸ್: ಕಾಫಿನಾಡಿಗೆ ಹುಲಿ ಉಗುರಿನ ಕಂಟಕ ಎದುರಾಗಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಯೇ ಈ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Ad Widget . Ad Widget .

ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಡಿ ಅರ್ ಎಫ್ಓ(DRFO) ದರ್ಶನ್ ಎನ್ನುವವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಕಳಸದ ಅರಣ್ಯ ಅಧಿಕಾರಿಯಾಗಿರುವ ದರ್ಶನ್ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಕೊಪ್ಪ ಡಿಎಫ್ಓ ನಂದೀಶ್ ಆದೇಶ ಹೊರಡಿಸಿದ್ದರು. ಅಮಾನತು ಮಾಡಿದ ಮೇಲೂ ವಿಚಾರಣೆಗೆ ಹಾಜರಾಗದ ದರ್ಶನ್‌ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

Ad Widget . Ad Widget .

ಕಳಸದ ಡಿಆರ್ ಎಫ್ಓ ದರ್ಶನ್ ಅವರು ಹುಲಿ ಉಗುರು ಧರಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ದರ್ಶನ್ ಚಿಕ್ಕಮಗಳೂರು ತಾಲೂಕು ಆಲ್ದೂರು ಮೂಲದವರಾಗಿದ್ದು, ಇವರ ಮೇಲೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರು ಲಿಖಿತ ದೂರು ನೀಡಿದ್ದರು. ಇವರು ಹುಲಿ ಉಗುರು ಧರಿಸಿದ್ದು ಸೂಕ್ತ ಕ್ರಮ ಕೈಗೊಂಡು, ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು. ಈ ಆಧಾರದ ಮೇಲೆ ತನಿಖೆ ನಡೆಸಿ ಕ್ರಮ ತೆಗೆದು ಕೊಂಡಿರುವುದಾಗಿ ಕೊಪ್ಪ ಡಿಎಫ್ಓ ನಂದೀಶ್ ಹೇಳಿದ್ದಾರೆ.

ಅ. 27ರಂದು ಮಧ್ಯಾಹ್ನ 12ಗಂಟೆಗೆ ದರ್ಶನ್‌ರನ್ನು ಅಮಾನತು ಮಾಡಲಾಗಿತ್ತು. ಬಳಿಕ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಎಸಿಎಫ್ ಚೇತನ್ ಗಸ್ತಿ, ಕಳಸ ಆರ್ಎಫ್ಓ ನಿಶ್ಚಿತ ನೇತೃತ್ವದ ತಂಡ ಬಂಧಿಸಿ ಕೊಪ್ಪ ಡಿಎಫ್‌ಓ ನಂದೀಶ್ ಮುಂದೆ ಹಾಜರು ಪಡಿಸಿದ್ದಾರೆ.

Leave a Comment

Your email address will not be published. Required fields are marked *