ಚಂದ್ರಗ್ರಹಣ ಹಿನ್ನಲೆ| ಉಡುಪಿ ಮಠ, ಕೊಲ್ಲೂರು ದೇವಸ್ಥಾನದಿಂದ ಪ್ರಕಟಣೆ

ಸಮಗ್ರ ನ್ಯೂಸ್: ಶನಿವಾರ ಸಂಭವಿಸುವ ಚಂದ್ರಗ್ರಹಣ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿತ್ಯಪೂಜೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ ಶನಿವಾರ ಸಂಜೆ 5ರಿಂದ 6 ಗಂಟೆಗಳ ನಡುವೆ ಭೋಜನ ಶಾಲೆಯ ಮುಖ್ಯಪ್ರಾಣ ದೇವರ ರಂಗಪೂಜೆ ಸಂಜೆ 4 ಗಂಟೆಯೊಳಗೆ ಸಂಪನ್ನಗೊಳ್ಳಲಿದೆ. ಈ ದಿನ ರಾತ್ರಿ ಊಟ ಇರುವುದಿಲ್ಲ. ಭಾನುವಾರದ ಮಧ್ಯಾಹ್ನ 11 ಗಂಟೆಗೆ ನಡೆಯುವ ಮಹಾಪೂಜೆಯು 10 ಗಂಟೆಗೆ ಮುಗಿಯಲಿದೆ. ಉಳಿದಂತೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ತಿಳಿಸಲಾಗಿದೆ.

Ad Widget ... ..

ಮೂಕಾಂಬಿಕೆಗೆ ವಿಶೇಷ ಅಭಿಷೇಕ:
ಚಂದ್ರಗ್ರಹಣ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ದೈನಂದಿನ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ ಗ್ರಹಣ ಕಾಲದಲ್ಲಿ ಶ್ರೀ ಮೂಕಾಂಬಿಕೆಗೆ ವಿಶೇಷ ಅಭಿಷೇಕ ಮಾಡಲಾಗುತ್ತದೆ. ಎಂದಿನಂತೆ ಶನಿವಾರ, ಭಾನುವಾರ ದೇವಿ ದರ್ಶನಕ್ಕೆ ಅವಕಾಶ ಇದೆ. ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಪ್ರಸಾದ ಭಕ್ತರಿಗೆ ನೀಡಲಾಗುತ್ತದೆ ಎಂದು ದೇವಳ ಪ್ರಕಟಣೆ ತಿಳಿಸಿದೆ.

Ad Widget

Leave a Comment

Your email address will not be published. Required fields are marked *