ಯಡಿಯೂರಪ್ಪಗೆ ಜೀವ ಬೆದರಿಕೆ/ ಇನ್ಮುಂದೆ ಬಿಎಸ್‍ವೈಗೆ ಝಡ್ ಕೆಟಗರಿ ಭದ್ರತೆ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜೀವ ಬೆದರಿಕೆ ಇದೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ವರದಿಯ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯ ಯಡಿಯೂರಪ್ಪ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಿ ಆದೇಶ ಹೊರಡಿಸಿದೆ. ಯಡಿಯೂರಪ್ಪ ಅವರಿಗೆ ಕರ್ನಾಟಕದಲ್ಲಿ ಮಾತ್ರ ಈ ಭದ್ರತೆ ಲಭ್ಯವಾಗಲಿದ್ದು, ಶೀಘ್ರದಲ್ಲಿ ಸಿಆರ್‍ಪಿಎಫ್ ಭದ್ರತಾ ಹೊಣೆಯನ್ನು ವಹಿಸಿಕೊಳ್ಳಲಿದೆ.

Ad Widget ... ..

ಗಣ್ಯರಿಗೆ ಇರುವ ಬೆದರಿಕೆಯ ಕುರಿತು ಗುಪ್ತಚರ ಇಲಾಖೆಯ ವರದಿಯ ಅನುಗುಣವಾಗಿ ಭದ್ರತೆಯ ವ್ಯವಸ್ಥೆಯನ್ನು ನೋಡಿಕೊಳ್ಳಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಬಿಎಸ್‍ವೈ ಘೋಷಿಸಿದ ಬೆನ್ನಲ್ಲೇ, ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.

Ad Widget

Leave a Comment

Your email address will not be published. Required fields are marked *