Ad Widget .

ಧರ್ಮಸ್ಥಳ ದೇವಸ್ಥಾನ ನಿಯಮಗಳಡಿ ನೋಂದಣಿಯಾಗಿಲ್ಲ| ಆಡಳಿತ ಮಂಡಳಿ ವಿರುದ್ದ ಕ್ರಮಕ್ಕೆ ಒತ್ತಾಯ

ಸಮಗ್ರ ನ್ಯೂಸ್: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಣಿಯೇ ಆಗಿಲ್ಲ ಎಂಬುದು ಆರ್‌ ಟಿಐನಡಿ ಬಹಿರಂಗಗೊಂಡಿದ್ದು, ಹೀಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ʼನೈಜ ಹೋರಾಟಗಾರರ ವೇದಿಕೆʼ ಒತ್ತಾಯಿಸಿದೆ.

Ad Widget . Ad Widget .

ಈ ಸಂಬಂಧ ದಕ್ಷಿಣ‌ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿರುವ ʼನೈಜ ಹೋರಾಟಗಾರರ ವೇದಿಕೆʼಯ ಹೆಚ್ ಎಂ ವೆಂಕಟೇಶ್ , ಲೋಕೇಶ್ ಬಿಎಸ್, ಹಂದ್ರಾಳ್ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ ಹಾಗೂ ಜಗದೀಶ್‌ ಅವರು, ʼಮಂಜುನಾಥೇಶ್ವರ ದೇವಸ್ಥಾನದ ನೋಂದಾವಣೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದಾರೆʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Ad Widget . Ad Widget .

ʼʼಧರ್ಮಸ್ಥಳದ ಧರ್ಮಾಧಿಕಾರಿಯಂದೆ ಖ್ಯಾತಿ ಪಡೆದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಶಾಸನಗಳನ್ನು ರೂಪಿಸುವಲ್ಲಿ ಅವರು ಪಾತ್ರದಾರರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾದರೂ ಸಹಿತ ಶಾಸನಗಳನ್ನು ರಚಿಸುವಲ್ಲಿ ಪಾತ್ರರಾದ ವೀರೇಂದ್ರ ಹೆಗ್ಗಡೆಯವರೇ ಈಗ ಕಾನೂನು ಕಾಯ್ದೆಗಳನ್ನು ಉಲ್ಲಂಘಿಸಿರುವುದು ಉಲ್ಲೇಖ 1ರಲ್ಲಿ ಸ್ಪಷ್ಟವಾಗಿದೆʼʼ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ʼʼರಾಜ್ಯದಲ್ಲಿ ಹಲವಾರು ದೇವಸ್ಥಾನಗಳಿದ್ದು ಭಕ್ತರು ಸಣ್ಣಪುಟ್ಟ ದೇವಸ್ಥಾನಗಳ ಆಡಳಿತವನ್ನು ನಡೆಸುತ್ತಿದ್ದು ಅವರು ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಯನ್ನು ಪಾಲಿಸಿಲ್ಲವೆಂದರೆ ದೇವರ ಮೇಲಿನ ಭಕ್ತಿ ಮತ್ತು‌ ತಿಳುವಳಿಕೆಯ ಜ್ಞಾನದ ಕೊರತೆಯ ಜೊತೆ ಕಾನೂನಿನ ಅರಿವಿಲ್ಲದೆ ಇರಬಹುದು. ಆದರೆ ಬಹಳ ಮುಖ್ಯವಾಗಿ ದೇಶದ ಕಾನೂನು, ಕಾಯ್ದೆ, ಶಾಸನಗಳನ್ನು ರಚಿಸುವಲ್ಲಿ ರಾಜ್ಯಸಭಾ ಸದಸ್ಯರಾಗಿ ಪಾತ್ರವಹಿಸುತ್ತಿರುವ ಕಾನೂನು ಕಾಯ್ದೆಗಳ ಸಂಪೂರ್ಣ ಮಾಹಿತಿ, ಅರಿವು ಉಳ್ಳ ವೀರೇಂದ್ರ ಹೆಗ್ಗಡೆಯವರು ತಮ್ಮದೇ ಆಡಳಿತವಿರುವ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೋಂದಾಯಿಸದೆ ಇರುವುದು ಅಕ್ಷಮ್ಯ ಅಪರಾಧ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಅರಿವು ಇರುವ ಯಾರೂ ವೀರೇಂದ್ರ ಹೆಗ್ಗಡೆಯವರ ಈ ನಡೆಯನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹೀಗಾಗಿ ಮನವಿ ಪತ್ರ ತಲುಪಿದ ಏಳು ದಿನಗಳ ಒಳಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ʼನೈಜ ಹೋರಾಟಗಾರರ ವೇದಿಕೆʼ ಸದಸ್ಯರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *