Ad Widget .

Food Recipe|ಕೇಸರಿ ಪಿಸ್ತಾ ಕೀರ್ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ಕೇಸರಿ ಪಿಸ್ತಾ ಕೀರ್ ಹೇಗ್ ಮಾಡೋದು. ಇದಿಕ್ಕೆ ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ.

Ad Widget . Ad Widget .

ಬೇಕಾಗುವ ಪದಾರ್ಥಗಳು:- ತುಪ್ಪ- ಅರ್ಧ ಬಟ್ಟಲು, ಬಾಸುಮತಿ ಅಕ್ಕಿ- ಒಂದು ಬಟ್ಟಲು, ಹಾಲು- ಅರ್ಧ ಲೀಟರ್, ದ್ರಾಕ್ಷಿ- ಸ್ವಲ್ಪ, ಗೋಡಂಬಿ-ಸ್ವಲ್ಪ,
ಏಲಕ್ಕಿ 2-3, ಕೇಸರಿ- ಸ್ವಲ್ಪ, ಸಕ್ಕರೆ- ಒಂದೂವರೆ ಬಟ್ಟಲು
ಪಿಸ್ತಾ- 10-15

Ad Widget . Ad Widget .

ಮಾಡುವ ವಿಧಾನ:- ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಆಮೇಲೆ ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ. ನಂತರ ಅದೇ ಪಾತ್ರೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಅದಕ್ಕೆ ಸಕ್ಕರೆಯನ್ನು ಹಾಕಿ. ನಂತರ ಹಾಲು ತಳ ಹಿಡಿಯದಂತೆ ನೋಡಿಕೊಳ್ಳಿ. ಬಳಿಕ ಏಲಕ್ಕಿ ಪುಡಿ, ಕೇಸರಿ ಹಾಗೂ ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾವನ್ನು ಹಾಕಿ. ಆಮೇಲೆ ಹಾಲಿಗೆ ಅಕ್ಕಿಯನ್ನು ಹಾಕಿ ಬೇಯಿಸಿ. ಅಕ್ಕಿ ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಫ್ರಿಡ್ಜ್ ನಲ್ಲಿಟ್ಟು, ತಣ್ಣನೆಯ ಕೀರನ್ನು ಸವಿಯಿರಿ.

Leave a Comment

Your email address will not be published. Required fields are marked *