Ad Widget .

ವಿಶ್ವಕಪ್ ಕ್ರಿಕೆಟ್| ನೆದರ್ ಲ್ಯಾಂಡ್ ವಿರುದ್ಧ ದಾಖಲೆ ಅಂತರದ ಜಯಗಳಿಸಿದ ಆಸ್ಟ್ರೇಲಿಯಾ

ಸಮಗ್ರ ನ್ಯೂಸ್: ಹೊಸದಿಲ್ಲಿಯಲ್ಲಿ ಬುಧವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ಅಬ್ಬರಿಸಿ ತನ್ನ ಸಾಮರ್ಥ್ಯ ಮೆರೆದಿದ್ದು ನೆಡೆರ್ಲ್ಯಾಂಡ್ಸ್ ವಿರುದ್ಧ ದಾಖಲೆಯ 309 ರನ್ ಗಳ ಜಯ ತನ್ನದಾಗಿಸಿಕೊಂಡಿದೆ.

Ad Widget . Ad Widget .

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯ ಮ್ಯಾಕ್ಸ್ ವೆಲ್ ಸ್ಪೋಟಕ ದಾಖಲೆಯ ಶತಕ, ವಾರ್ನರ್ ಅವರ ಅಮೋಘ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 399 ರನ್ ಗಳನ್ನು ಕಲೆ ಹಾಕಿತು.

Ad Widget . Ad Widget .

400 ರನ್ ಗಳ ಗುರಿ ಬೆನ್ನಟ್ಟಿದ ನೆಡೆರ್ಲ್ಯಾಂಡ್ಸ್ 21ಓವರ್ ಗಳಲ್ಲಿ 90 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.

ಆಸೀಸ್ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ಆಡಮ್ ಝಂಪಾ 4 ವಿಕೆಟ್ ಕಬಳಿಸಿದರು. ಮಿಚೆಲ್ ಮಾರ್ಷ್ 2 ಮತ್ತು ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ನಾಯಕ ಪ್ಯಾಟ್ ಕಮ್ಮಿನ್ಸ್ ತಲಾ 1 ವಿಕೆಟ್ ಪಡೆದರು.

ಏಕದಿನದಲ್ಲಿ ರನ್‌ಗಳ ಅಂತರದ ಅತಿ ದೊಡ್ಡ ಎರಡನೇ ಗೆಲುವು ಇದಾಗಿದೆ. ಭಾರತ ಇದೇ ವರ್ಷ ಶ್ರೀಲಂಕಾ ವಿರುದ್ಧ ತಿರುವನಂತಪುರ ದಲ್ಲಿ
317 ರನ್ ಗಳ ಗೆಲುವು ಮೊದಲನೆಯದ್ದಾಗಿ ಉಳಿದಿದೆ.

ಮಿಚೆಲ್ ಸ್ಟಾರ್ಕ್ ವಿಶ್ವಕಪ್ ನಲ್ಲಿ 56 ನೇ ವಿಕೆಟ್ ಪಡೆದುಕೊಂಡರು. ಗ್ಲೆನ್ ಮೆಕ್‌ಗ್ರಾತ್ 71 ಮತ್ತು ಮುತ್ತಯ್ಯ ಮುರಳೀಧರನ್ 68 ವಿಕೆಟ್ ಪಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ. ಲಂಕಾದ ಮಾಲಿಂಗ ಕೂಡ 56 ವಿಕೆಟ್ ಪಡೆದಿದ್ದಾರೆ.

Leave a Comment

Your email address will not be published. Required fields are marked *