Ad Widget .

ವಿಜಯಪುರ:ನವರಾತ್ರಿ ಸಮಯದಲ್ಲಿ ದೇವಿಗೆ ಅವಮಾನ

ಸಮಗ್ರ ನ್ಯೂಸ್: ನಾಡಿನೆಲ್ಲೆಡೆ ದಸರಾ ಹಬ್ಬ ಆಚರಣೆ ಅದ್ದೂರಿಯಾಗಿ ನಡೆದಿದೆ. ಅದರಲ್ಲೂ ನಾಡಹಬ್ಬ ದಸರಾ ಆಚರಣೆಯ ಬಳಿಕ ಶ್ರೀ ಅಂಬಾ ಭವಾನಿ ಮೂರ್ತಿ ವಿವಸ್ತ್ರಗೊಳಿಸಿ ಅವಮಾನ ಮಾಡಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಅನ್ಯ ಕೋಮಿನ 17 ವರ್ಷದ ಅಪ್ರಾಪ್ತ ಬಾಲಕನಿಂದ ಕೃತ್ಯವೆಸಗಲಾಗಿದ್ದು, ಅ. 24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಸರಾ ಹಬ್ಬದ ಪ್ರಯುಕ್ತ ಶ್ರೀ ಅಂಬಾ ಭವಾನಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಹಬ್ಬದ ಬಳಿಕ ಕೊಠಡಿಯಲ್ಲಿದ್ದ ದೇವಿಯ ಮೂರ್ತಿಗೆ ತೊಡಿಸಿದ್ದ ಸೀರೆಯನ್ನು ತೆಗೆದು ಅವಮಾನಿಸಲಾಗಿದೆ. ಇದನ್ನು ಕಂಡ ಸ್ಥಳೀಯರಿಂದ ಅಪ್ರಾಪ್ತ ಬಾಲಕನಿಗೆ ಧರ್ಮದೇಟು ನೀಡಿದ್ದಾರೆ.

Ad Widget . Ad Widget .

ಸದ್ಯ ಯುವಕನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ಕಾನೂನು ಪ್ರಕಾರ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *