ಸಮಗ್ರ ನ್ಯೂಸ್: ಕೋಮಲ ಎಂಬಾಕೆಯ ಜೊತೆ ಪಾರ್ಟನರ್ ಶಿಪ್ ನಲ್ಲಿ ಬ್ಯೂಸಿನೆಸ್ ಮಾಡ್ತಿದ್ದ ಅಭಿಲಾಷ್ ನನ್ನು ಒಂದೂವರೆ ಕೋಟಿ ಹಣದ ವಿಚಾರವಾಗಿ ಕಿಡ್ನ್ಯಾಪ್ ಮಾಡಿದ ಘಟನೆ ಆ.24 ರಂದು ನಡೆದಿದೆ.

ಉದ್ಯಮಿ ಅಭಿಲಾಷ್ ನ ಕುತ್ತಿಗೆಗೆ ಚಾಕು ಇಟ್ಟು ಕಿಡ್ನ್ಯಾಪ್ ಮಾಡಿದ್ದು, ಅಪಹರಣಕಾರರು ಕುತ್ತಿಗೆಗೆ ತಲೆಗೆ ಬಾಟಲ್ ನಿಂದ ಒಡೆದು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ರಾಮಮೂರ್ತಿನಗರದ ಗೋಡಾನ್ ನಲ್ಲಿಟ್ಟಿದ್ದರು ನಂತರ ಕೋಲಾರಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗಿದೆ.

ಪತ್ನಿಗೆ ಹಾಗೂ ತಂದೆಗೆ ಕರೆ ಮಾಡಿ 50 ಲಕ್ಷ ಹಣ ಕೇಳಿದ್ದ ಕಿಡ್ಬ್ಯಾಪರ್ಸ್
ಕೊಡದಿದ್ದಾಗ ವಿಡೀಯೋಕಾಲ್ ಮಾಡಿ ಮತ್ತೆ ಹಲ್ಲೆಗೆ ಮುಂದಾಗಿದ್ದರು.
ನಂತರ ಪೊಲೀಸರಿಗೆ ಆರೋಪಿಗಳ ಮೊಬೈಲ್ ನಿಂದಲೇ ಮಾಹಿತಿ ನೀಡಿದ್ದ ಅಭಿಲಾಷ್ ನಂತರ ಪೊಲೀಸರು ಮೊಬೈಲ್ ಟ್ರಾಕ್ ಮಾಡುವ ಮೂಲಕ ಉದ್ಯಮಿಯನ್ನ ಪತ್ತೆ ಹಚ್ಚಿದ್ದಾರೆ.
ಈ ವೇಳೆ ಹತ್ತು ಜನರಿಂದ ನಡೆದ ಕಿಡ್ಬ್ಯಾಪ್ ನಡೆಸಲಾಗಿದ್ದು ನಾಲ್ಕು ಜನರ ಬಂಧನವಾಗಿದೆ. ಪ್ರಮುಖ ಆರೋಪಿತೆ ಕೋಮಲ ಹಾಗು ರಾಹುಲ್ ಪರಾರಿಯಾಗಿದ್ದು ರಾಮಮೂರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಇದೀಗ ರಾಮಮೂರ್ತಿನಗರ ಪೊಲೀಸ್ ಠಾಣೆಯಿಂದ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಕೇಸ್ ವರ್ಗಾಯಿಸಲಾಗಿದೆ.