ನಟ ದರ್ಶನ್ ವಿರುದ್ಧವೂ ಹುಲಿಉಗುರು ಆರೋಪ| ಬಂಧಿಯಾಗ್ತಾರಾ ಡಿ ಬಾಸ್?

ಸಮಗ್ರ ನ್ಯೂಸ್: ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಧರಿಸಿದ್ದರಿಂದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧವೂ ಗಂಭೀರ ಆರೋಪ ಕೇಳಿ ಬರ್ತಿದೆ.

Ad Widget ... ..

ಹುಲಿ ಉಗುರು ಬಳಸಿ ಡಾಲರದ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಹೀಗಾಗಿ ದರ್ಶನ್ ವಿರುದ್ಧ ತನಿಖೆಗೆ ಆಗ್ರಹಿಸಲಾಗಿದೆ.

Ad Widget

ಅಕ್ಟೋಬರ್ 25 ರಂದು 11:30ಕ್ಕೆ ನಟ ದರ್ಶನ್ ವಿರುದ್ದ ಜೆಡಿಯು ಪಕ್ಷ ದೂರು ದಾಖಲಿಸಲಿದೆ. ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ದೂರಿ ದಾಖಲಿಸಲು ಜೆಡಿಯು ಪಕ್ಷ ಮುಂದಾಗಿದೆ. ದರ್ಶನ್ ಕುತ್ತಿಗೆಯಲ್ಲಿ ಹುಲಿ ಉಗುರು ಹೋಲುವ ಡಾಲರ್ ಹಾಕಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ದರ್ಶನದ ವೇಳೆ ಹುಲಿ ಉಗುರು ಹೋಲುವ ಡಾಲರ್ ಅನ್ನು ದರ್ಶನ್ ಹಾಕಿದ್ದರು.

ಹೀಗಾಗಿ ಅರಣ್ಯ ಸಂರಕ್ಷದಾಧಿಕಾರಿಗಳು ಕೂಡಲೇ ದರ್ಶನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ನಟ ದರ್ಶನ್ ವಿರುದ್ಧ ತನಿಖೆ ನಡೆಸಿ ಹುಲಿ ಉಗುರು ಪತ್ತೆ ಆದ್ರೆ ಕೂಡಲೇ ಕ್ರಮಕ್ಕೆ ಜೆಡಿಯು ಪಕ್ಷದ ವತಿಯಿಂದ ಆಗ್ರಹಿಸಲಾಗಿದೆ.

Leave a Comment

Your email address will not be published. Required fields are marked *