Ad Widget .

ನವರಾತ್ರಿ ನವದುರ್ಗೆ| ಅಭಯ ಪ್ರದಾಯಿಣಿ ಸಿದ್ದಿಧಾತ್ರಿ

ಸಮಗ್ರ ವಿಶೇಷ:ನವಮಿ ಅಥವಾ ಮಹಾ ನವಮಿಯಂದು, ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಜೊತೆಗೆ ಮಹಾ ನವಮಿಯ ದಿನ ತಾಯಿ ಚಾಮುಂಡೇಶ್ವರಿಯನ್ನು ಮಹಿಷ ಮರ್ದಿನಿ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ. ಪುರಾಣದ ಕತೆಗಳ ಪ್ರಕಾರ ತಾಯಿಯು ಮಹಿಷಾಸುರನನ್ನು ಮರ್ದನ ಮಾಡಿ ವಿಜಯ ಸಾಧಿಸುವ ಹಬ್ಬವೇ ವಿಜಯ ದಶಮಿ. ಅರ್ಥಾತ್ ಮಹಾ ನವಮಿ. ಒಂಭತ್ತು ದಿನಗಳ ಕಾಲ ಯುದ್ಧ ಮಾಡುವ ತಾಯಿಯು, ಕೊನೆಯ ದಿನದಂದು ಮಹಿಷನನ್ನು ಮರ್ಧನ ಮಾಡುತ್ತಾಳೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಾಯಿ ಸಿದ್ಧಿದಾತ್ರಿಯು ಕೆಂಪು ಸೀರಿಯುಟ್ಟು ಸಿಂಹದ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಭಾಗದ ಒಂದು ಕೈನಲ್ಲಿ ಕಮಲ, ಮತ್ತೊಂದು ಕೈನಲ್ಲಿ ಶಂಕವಿದೆ. ಬಲಗೈನಲ್ಲಿ ಗಧೆ ಮತ್ತು ಚಕ್ರವಿದೆ. ಆಕೆಯು ಕಮಲದ ಹೂವಿನ ಕಡೆಗೆ ನೋಡುತ್ತಿರುತ್ತಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ. “ಸಿದ್ಧಿ” ಎಂದರೆ ಪರಿಪೂರ್ಣತೆ “ದಾತ್ರಿ” ಎಂದರೆ “ಕೊಡುವವಳು” ಆದ್ದರಿಂದ ಆಕೆಯನ್ನು ಮಾತಾ ಸಿದ್ಧಿದಾತ್ರಿ ಎಂದು ಬಣ್ಣಿಸಲಾಗುತ್ತದೆ. ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ ಅಥವಾ ಅವರನ್ನು ಹಿಂಸಿಸುತ್ತಾರೆಯೋ, ಆ ಸಂದರ್ಭದಲ್ಲಿ ದೇವಿಯು ಧರ್ಮಸಂಸ್ಥಾಪನೆಗಾಗಿ ಮತ್ತೆ ಅವತಾರ ತಾಳುತ್ತಾಳೆ ಎಂದು ನಂಬಲಾಗಿದೆ.

Ad Widget . Ad Widget . Ad Widget .

ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ. ಹಾಗಾಗಿ ತಾಯಿ ಸಿದ್ಧತಾತ್ರಿಯ ಕೃಪೆಯಿಂದ ಭಕ್ತರು ತಮ್ಮ ನಿರ್ವಾಣ ಚಕ್ರದಲ್ಲಿ ಇರುವ ಶಕ್ತಿಯನ್ನು ಪಡೆಯುತ್ತಾರೆ. ಇದೆಲ್ಲದರ ಜೊತೆಗೆ ಸಿದ್ಧಿದಾತ್ರಿ ದೇವಿಯನ್ನು ಕೇತು ಗ್ರಹವನ್ನು ಆಳುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಪೂಜೆ ಮಾಡುವುದರಿಂದ ಜಾತಕದಲ್ಲಿರುವ ಕೇತುವಿನ ಕೆಟ್ಟ ಪರಿಣಾಮಗಳನ್ನು ನಿವಾರಣೆ ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯು ಆಕೆಗಿದೆ ಎನ್ನುವ ನಂಬಿಕೆಯಿದೆ.

Leave a Comment

Your email address will not be published. Required fields are marked *