Ad Widget .

ಪುತ್ತೂರು: MLA ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ| ಪುತ್ತಿಲ ಪರಿವಾರದ ಮುಖಂಡ ರಾಜಶೇಖರ ವಿರುದ್ಧ FIR

ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ಸಿ. ಶಿವಮೂರ್ತಿ ಎಂಬ ವ್ಯಕ್ತಿಗೆ ನಂಬಿಸಿ, ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.50 ಕೋಟಿ ರೂಪಾಯಿ ವಂಚನೆ ಮಾಡಿದ ಬಗ್ಗೆ ವಿಜಯನಗರ ಪೋಲೀಸರಿಗೆ ಈಗ ದೂರು ನೀಡಿದ್ದಾರೆ. ಹಾಗೂ ಬೆಂಗಳೂರಿನ‌ಲ್ಲಿ ಪೋಲೀಸ್ ಮಹಾನಿರ್ದೇಶಕರು, ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ.

Ad Widget . Ad Widget .

ಸಿದ್ದಲಿಂಗಪ್ಪ ಎಂಬ ವ್ಯಕ್ತಿಗೆ ವಿಜಯನಗರ ಜಿಲ್ಲೆಯ ಹರಿಗಬೊಮ್ಮನ ಹಳ್ಳಿಯ ಎಂಬ‌ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಪುತ್ತೂರು ಮೂಲದ ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.55 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ, ಹಾಗೂ ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿಸಿದರ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Ad Widget . Ad Widget .

ಒಟ್ಟಿನಲ್ಲಿ ಇದೀಗ ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ IPC 1860 ( U/s, 420, 506, 34 ) ಅಡಿ 19/10/2023 ರಂದು ಪ್ರಕರಣ ದಾಖಲಾಗಿದೆ.‌ ಇಂದು ಅಂದರೆ 21 /10/2023 ರಂದು ವಂಚನೆಗೊಳಗಾದ ಶಿವಮೂರ್ತಿಯವರು ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಸಿ.ಬಿ‌. ತನಿಖೆ ನಡೆಸಿ, ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ವಂಚನೆ ಆರೋಪಿ ರಾಜಶೇಖರ ಪುತ್ತೂರಿನ ಪುತ್ತಿಲ ಪರಿವಾರದ ಮುಖಂಡರು ಎನ್ನಲಾಗಿದ್ದು, ಮತ್ತು ಚುನಾವಣೆ ಸಂದರ್ಭದಲ್ಲಿ ಕೆಲವೊಂದು ವೇದಿಕೆ ಗಳಲ್ಲಿ ಕಾಣಿಸಿ ಕೊಂಡಿದ್ದರು.

Leave a Comment

Your email address will not be published. Required fields are marked *