Ad Widget .

ದ್ವಾದಶ ‌ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಅಕ್ಟೋಬರ್ 22ರಿಂದ 28ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Ad Widget . Ad Widget .

ಮೇಷ: ಆಶ್ವೀಜ ಮಾಸ ಶುಕ್ಲ ಪಕ್ಷವು ಆರಂಭವಾಗಿ ಸಪ್ತರಾತ್ರಿಗಳು ಕಳೆದು, ದುರ್ಗಾಷ್ಟಮಿ, ಮಹಾನವಮಿ, ದಶಮಿಯೊಂದಿಗೆ ಶರನ್ನವರಾತ್ರಿ ಸಂಪನ್ನಗೊಳ್ಳುತ್ತದೆ. ಅಷ್ಟಮಿ, ನವಮಿ, ಚತುರ್ದಶಿಯು ದೇವಿ ಆರಾಧನೆಗೆ ಅತ್ಯುತ್ತಮ ಕಾಲವೆಂದು ಶಾಸ್ತ್ರಗಳು ಹೇಳುತ್ತವೆ. ದುರ್ಗಾಪೂಜೆ, ಹವನ, ನವಮಿಯಂದು ಚಂಡಿಕಾ ಪಾರಾಯಣ ಮಾಡಿ. ದೈವಭಕ್ತಿಯಿಂದ ಒಳ್ಳೆಯ ಕಾಲ ಮೂಡಿಬರುತ್ತದೆ. ಅಶ್ವಿನಿ ನಕ್ಷತ್ರದವರು ಹೆಚ್ಚಿನ ದೈವಭಕ್ತಿ, ಶ್ರದ್ಧೆಯಿಂದ ಸುಬ್ರಹ್ಮಣ್ಯನನ್ನು ಪೂಜಿಸಿ.

Ad Widget . Ad Widget .

ವೃಷಭ ರಾಶಿ:
ಈ ರಾಶಿಯವರಿಗೆ ಇನ್ನು 10 ದಿನಗಳ ಕಾಲ ಗುರುವು ರಾಹುವಿನ ಸಂಪರ್ಕದಲ್ಲಿದ್ದು, ಬೇಡದ ವಿಚಾರಗಳಿಗೆ ಆತಂಕ ಉಂಟಾಗುವ ಸಮಯ. ಚಂದ್ರಗ್ರಹಣವಾದ್ದರಿಂದ ಅಲ್ಪಮಟ್ಟಿನ ದೋಷವಿದ್ದು, ಶೇಕಡ 60 ಶುಭಫಲವಿದೆ. ರಾಹುವಿನ ಬದಲಾವಣೆ ನಿಮಗೆ ಶುಭ ತರುವ ಕಾಲ. ಈ ಮಾಸದಿಂದ ಧನತ್ರಯೋದಶಿ ಬರುವವರೆಗೂ ದುರ್ಗೆಯನ್ನು ಪೂಜಿಸಿ. ನಿಮಗೆ ಸುಖ ನೀಡಿ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾಳೆ.

ಮಿಥುನ ರಾಶಿ:
ನಾವು ನಮ್ಮ ಮನೆಯಲ್ಲಿ ಕೂತು ಎದುರು ಮನೆಗೆ ಕಲ್ಲನ್ನು ಹೊಡೆದರೆ ನಮಗೆ ಕಲ್ಲೇ ಕಂಟಕಪ್ರಾಯವಾಗುತ್ತದೆ. ಕುಚೇಷ್ಟೆ, ಕುತಂತ್ರ ಎಲ್ಲವನ್ನೂ ಬಿಟ್ಟುಬಿಡಿ. ಮೇ 1ರವರೆಗೆ ಗುರುವು ಏಕಾದಶದಲ್ಲಿ ಇರುವುದರಿಂದ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಿದರೆ ಒಳ್ಳೆಯ ಫಲ ಅನುಭವಿಸಬಹುದು. ತಾಳ್ಮಿಯಿಂದ ವರ್ತಿಸಿ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ವಿಷ್ಣು ಸಹಸ್ರನಾಮವನ್ನು ತಪ್ಪದೇ ಪಾರಾಯಣ ಮಾಡಿ. ಒಳಿತಾಗುತ್ತದೆ. ಮುಂದಿನ ದಾರಿ ಗೋಚರಿಸುತ್ತದೆ.

ಕಟಕ ರಾಶಿ:
ದೈವದ ಮೇಲೆ ಪರಿಪೂರ್ಣ ವಿಶ್ವಾಸ ಇಟ್ಟರೆ ಜಗವನ್ನೇ ಗೆಲ್ಲಬಹುದು. ಈ ರಾಶಿಯವರಿಗೆ ಈಶ್ವರನ ಪರಿಪೂರ್ಣ ಅನುಗ್ರಹವಿದೆ. ಅಷ್ಟಮದಲ್ಲಿ ಶನಿಯಿದ್ದರೂ ಪರವಾಗಿಲ್ಲ. ಶನಿಯು ಮಹಾದೇವನ ಸೃಷ್ಟಿಯೇ. ಶಿವನನ್ನು ಪ್ರಾರ್ಥಿಸಿ, ಅವನೇ ನಿಮಗೆ ರಕ್ಷಣೆಯನ್ನು ನೀಡುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಸಿಂಹ ರಾಶಿ:
ಸೂರ್ಯನಾರಾಯಣ ದೇವರನ್ನು ಪೂಜಿಸಿದರೆ ಸಕಲ ಭೋಗಭಾಗ್ಯಗಳು ಪ್ರಾಪ್ತವಾಗುತ್ತವೆ. ಮನುಷ್ಯರು ಆರೋಗ್ಯವಾಗಿ ಶತಾಯುಷ್ಯರಾಗಿ ಧೈರ್ಯ, ಕೀರ್ತಿ, ಯಶಸ್ಸು ಪಡೆದು ಸುಖವಾಗಿರುತ್ತಾರೆ. ಈ ಸಮಯದಲ್ಲಿ ನಿಮಗೆ ಸಪ್ತಮ ಶನಿ ಕೇಡು ಮಾಡುವುದಿಲ್ಲ. 9ರ ಗುರುವು ನಿಮ್ಮನ್ನು ಕಾಪಾಡಿ, ದಿಕ್ಸೂಚಿ ತೋರುತ್ತಾನೆ. ದುರ್ಗೆಯ ನಾಮ ಒಂದೇ ಸಾಕು, ಮುಂದೆ ಸಾಗಲು. ಗುರು ದತ್ತಾತ್ರೇಯನ ಅನುಗ್ರಹಕ್ಕೆ ಪಾತ್ರರಾಗಿ.

ಕನ್ಯಾ ರಾಶಿ:
ನಾರಾಯಣನು ಆದಿಶೇಷನ ಮೇಲೆ ಶಯನ ಮಾಡಿ ಆಕಾಶ-ಭೂಮಿಯನ್ನು ಸೃಷ್ಟಿಸಿದ್ದಾನೆ. ಮೊದಲು ಜಲಮಯ ಜಗತ್ತನ್ನು ಕೊಟ್ಟು ಆನಂತರದಲ್ಲಿ ಆಕಾಶವನ್ನು ಸೃಷ್ಟಿಸಿದ್ದಾನೆ. ಇದರ ಅರ್ಥ ಶಂಖ-ಚಕ್ರ ಗದಾಧಾರಿಯಾದ ವಿಷ್ಣುವಿನ ಅನುಗ್ರಹವಿದ್ದರೆ ಏನನ್ನು ಬೇಕಾದರೂ ಜಯಿಸಬಹುದು. ಶ್ರೀರಂಗಪಟ್ಟಣದ ರಂಗನಾಥನನ್ನು ಪೂಜಿಸಿ. ನಿಮ್ಮ ಭಾಗ್ಯದ ಬಾಗಿಲು ತೆರೆದು, ಜೀವನದಲ್ಲಿ ಅನುಕೂಲ ಉಂಟಾಗುತ್ತದೆ.

ತುಲಾ ರಾಶಿ:
ಗ್ರಹಾಧಿಪತಿಗಳ ಸ್ಥಾನಮಾನಕ್ಕಿಂತ ನಾವು ಮಾಡುವ ಪುಣ್ಯದ ಕೆಲಸಗಳಿಂದ ಅನಿರೀಕ್ಷಿತ ಜಯ, ಸುಖವನ್ನು, ಯಶಸ್ಸನ್ನು ಕೊಡುವಲ್ಲಿ ದೈವವೇ ನಿಮ್ಮನ್ನು ಕೊಂಡೊಯ್ದು ಒಳ್ಳೆಯ ಫಲವನ್ನು ನೀಡುತ್ತಾನೆ. ವಿಶೇಷವಾಗಿ ದುರ್ಗೆಯನ್ನು ಪೂಜಿಸಿದರೆ ಸುಖ-ಸಂತೋಷವನ್ನು ತಂದುಕೊಡುತ್ತಾಳೆ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ.

ವೃಶ್ಚಿಕ ರಾಶಿ:
ದೇವರಲ್ಲಿ ದೃಢವಾದ ನಂಬಿಕೆ, ಆತ್ಮವಿಶ್ವಾಸ, ದೈವಬಲವಿದ್ದರೆ ಆಕಾಶವನ್ನೇ ಮುಟ್ಟಬಹುದು. ಪ್ರಯತ್ನವು ನಿರಂತರವಾಗಿರಲಿ. ಸುಬ್ರಹ್ಮಣ್ಯ ದೇವರನ್ನು ಅನನ್ಯವಾಗಿ ನಂಬಿ, ಪೂಜಿಸಿ. ಬರಬೇಕಾದ ಧನಸಂಪತ್ತು ಬಂದು ಸೇರುತ್ತದೆ. ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ. ಒಳಿತಾಗುತ್ತದೆ.

ಧನುಸ್ಸು ರಾಶಿ:
ಶ್ರೀರಾಮಚಂದ್ರನು ತನ್ನ ಆತ್ಮರಕ್ಷಣೆಗಾಗಿ ಬಿಲ್ಲುಬಾಣದಿಂದ ಯುದ್ಧವನ್ನು ಮಾಡಿದರೂ, ದೈವಭಕ್ತರನ್ನು ಕಾಪಾಡುವುದು ಅವನ ಕರ್ತವ್ಯವೇ ಆಗಿರುತ್ತದೆ. ಆದರೆ, ನವಗ್ರಹಗಳ ಸಾಲಿನಲ್ಲಿ ಶನಿಯ ವಕ್ರತ್ವ ನವೆಂಬರ್ 4ರವರೆಗೆ ಇರುವುದರಿಂದ ಎಚ್ಚರಿಕೆಯಿಂದ ಸಾಗಿರಿ. ಭಗವಾನ್ ಶ್ರೀರಾಮನಂತೆ ತಾಳ್ಮೆ ಮತ್ತು ಧೈರ್ಯವಿರಲಿ. ನೀವು ನಿರೀಕ್ಷಿಸಿದ ಫಲಗಳು ದೊರೆಯಲು ಕೆಲವೇ ದಿನಗಳು ಬಾಕಿ ಇವೆ. ದೈವವೇ ನಿಮ್ಮನ್ನು ಕಾರ್ಯೋನ್ಮುಖರನ್ನಾಗಿ ಮಾಡುತ್ತದೆ.

ಮಕರ ರಾಶಿ:
ಗ್ರಹಗಳು ಯಾವಾಗಲೂ ಮನುಷ್ಯನಿಗೆ ಅಶುಭ ಫಲ ಕೊಡುತ್ತವೆ ಎಂದು ಭಾವಿಸುವುದು ನಮ್ಮ ದೌರ್ಬಲ್ಯ. ದುರ್ಬಲ ವ್ಯಕ್ತಿ ಏನು ಮಾಡಲು ಸಾಧ್ಯ? ದೌರ್ಬಲ್ಯ ದೂರ ಮಾಡಿ, ಹೆಚ್ಚಾಗಿ ದುಡಿದು ಸಂಪಾದಿಸಿದರೆ ದೇವರೇ ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಕೈಲಾಗದು ಎಂಬ ಶಬ್ದವಿಲ್ಲ. ಶ್ರಮಪಟ್ಟರೆ ಅದಕ್ಕೆ ತಕ್ಕ ಫಲ, ನಿರೀಕ್ಷಿಸಿದ ಸಂತೋಷ ದೊರೆಯುತ್ತದೆ. ಲಕ್ಷ್ಮೀ ನಾರಾಯಣನನ್ನು ಆರಾಧನೆ ಮಾಡಿ.

ಕುಂಭ ರಾಶಿ: ರಾಜ-ಮಹಾರಾಜರನ್ನು, ಪರಮಪೂಜ್ಯ ಪೀಠಾಧಿಪತಿಗಳನ್ನು ಪೂಜಿಸಲು, ಸ್ವಾಗತಿಸಲು ಕುಂಭವೇ ಬೇಕು. ಅಂತಹ ಕುಂಭ ರಾಶಿಯಲ್ಲಿ ಜನಿಸಿದ ನೀವು ನಿಮ್ಮನ್ನು ಶುಭ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಯಾವ ಗ್ರಹಗಳ ಬಾಧೆಯಿದ್ದರೂ, ಕೆಲಸಗಳು ಸುಸ್ಥಿತಿಯಲ್ಲಿ ಇರುತ್ತವೆ. ಬರಬೇಕಾದ್ದು ಬಂದು ಸೇರುತ್ತದೆ. ಶಿವಸಹಸ್ರನಾಮ ಪಾರಾಯಣ ಮಾಡಿ.

ಮೀನ ರಾಶಿ:
ಮನುಷ್ಯಜೀವಿಯಾದ ನಾವು ದೈವವೆಂಬ ನದಿಯಲ್ಲಿ ಮಿಂದು, ನಮ್ಮ ನೊಂದ ಮನಸ್ಸನ್ನು ಹತೋಟಿಗೆ ತಂದುಕೊಳ್ಳಬೇಕು. ಉಮಾಮಹೇಶ್ವರನನ್ನು, ದತ್ತಾತ್ರೇಯನನ್ನು ಪ್ರಾರ್ಥಿಸಿದರೆ ಯಾವ ಗ್ರಹಬಲವು ನಿಲ್ಲದೆ ಇದ್ದರೂ, ನಿಮ್ಮ ಜೀವನವು ಮುಂದೆ ಸಾಗುತ್ತದೆ. ಕೆಲಸಕಾರ್ಯಗಳಲ್ಲಿ ಪ್ರಗತಿ ಕಂಡುಕೊಳ್ಳಬಹುದು. ಸರ್ವಸಂಕಟ ಪರಿಹಾರ ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಶುಭಫಲಗಳನ್ನು ಕಂಡುಕೊಳ್ಳಿ.

Leave a Comment

Your email address will not be published. Required fields are marked *