Ad Widget .

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಒಳಗೆ ಅಕ್ರಮ ಪ್ರವೇಶ| ಇತ್ತಂಡಗಳ 20 ಮಂದಿ ವಿರುದ್ಧ ಕೇಸ್ ದಾಖಲು

ಸಮಗ್ರ ನ್ಯೂಸ್: ಪರಶುರಾಮ ಥೀಮ್ ಪಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಅ. 21 ರಂದು ಒಟ್ಟು 20 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ.

Ad Widget . Ad Widget .

ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ನಂತರ ಅ. 19ರಂದು ಕೆಲವರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೂರ್ತಿಯ ಪಕ್ಕಕ್ಕೆ ಹೋಗಿ ಮೂರ್ತಿಯ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಇದರಿಂದ ನನ್ನ ಮತ್ತು ಇತರ ಸಮಾನ ಮನಸ್ಕರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ದಿವ್ಯಾ ನಾಯಕ್‌ ಎಂಬವರು ಸುಹಾಸ್‌ ಶೆಟ್ಟಿ ಮುಟ್ಲುಪಾಡಿ, ಮಹಾವೀರ್‌ ಹೆಗ್ಡೆ, ಸುಮಿತ್‌ ಶೆಟ್ಟಿ ಕೌಡೂರು, ವಿಖ್ಯಾತ್‌ ಶೆಟ್ಟಿ, ಮುಸ್ತಾಫ ಜಾರ್ಕಳ, ರಾಕೇಶ್‌ ಶೆಟ್ಟಿ ಕುಕ್ಕುಂದೂರು ಹಾಗೂ ಸಮೃದ್ಧಿ ಪ್ರಕಾಶ್‌ ಶೆಟ್ಟಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget . Ad Widget .

ಥೀಮ್‌ ಪಾರ್ಕ್‌ಗೆ ಅಕ್ರಮ ಪ್ರವೇಶ : 13 ಮಂದಿ ವಿರುದ್ಧ ದೂರು
ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಸದ್ಯ ಥೀಮ್‌ ಪಾರ್ಕ್‌ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಅ. 19ರಂದು ಬೆಳಗ್ಗೆ 10.30ಕ್ಕೆ ಕೆಲವರು ಈ ಆದೇಶವನ್ನು ಉಲ್ಲಂಘಿಸಿ ಉಮಿಕಲ್ ಬೆಟ್ಟದ ಮೇಲೆ ಹೋಗಿ ಸರಕಾರಿ ಸೊತ್ತು ಆಗಿರುವ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚವನ್ನು ಹರಿದು ಹಾಕಿ ಕಂಚಿನ ಮೂರ್ತಿಯ ಮೇಲಿದ್ದ ಫಿನಿಷಿಂಗ್ ಲೇಪನವನ್ನು ಹರಿದು ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರಕಾರಕ್ಕೆ ನಷ್ಟವುಂಟುಮಾಡಿದ್ದಾರೆ ಮತ್ತು ಹಿಂದೂ ಧರ್ಮದ ಅನುಯಾಯಿಗಳ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ ಹಿಂದೂ ಧರ್ಮದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಎರ್ಲಪಾಡಿ ಗ್ರಾಮದ ಗೋವಿಂದೂರು ಜೋಗಬೆಟ್ಟು ಮನೆಯ ಸುನೀಲ್‌ ಹೆಗ್ಡೆ ಎಂಬವರು 13 ಮಂದಿಯ ವಿರುದ್ಧ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುನಿಲ್ ನೀಡಿದ ದೂರಿನ ಪ್ರಕಾರ ಪೊಲೀಸರು ಶುಭದ ರಾವ್‌, ದೀಕ್ಷಿತ್‌ ಶೆಟ್ಟಿ ದೊಂಡೇರಂಗಡಿ, ದೀಪಕ್‌ ಶೆಟ್ಟಿ ದೊಂಡೇರಂಗಡಿ, ಸುಬಿತ್‌ ಎನ್‌. ಆರ್‌., ವಿವೇಕಾನಂದ ಶೆಣೈ, ಯೋಗೀಶ ನಯನ್‌ ಇನ್ನಾ, ಸೂರಜ್‌ ಶೆಟ್ಟಿ ನಕ್ರೆ, ಪ್ರದೀಪ್‌ ಶೆಟ್ಟಿ ನಲ್ಲೂರು, ಅಲ್ಪಾಜ್‌, ಐವಾನ್‌ ಮಿರಾಂಡ ರಂಗನಪಲ್ಕೆ, ದಿವ್ಯಾ ನಾಯಕ್‌ ನೀರೆ, ಕೃಷ್ಣ ಶೆಟ್ಟಿ ನಲ್ಲೂರು, ಹರೀಶ್‌ ಪೂಜಾರಿ ಕಡ್ತಲ ಮತ್ತಿತರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *