ಕೆ ಎಸ್ ಆರ್ ಟಿ ಸಿ ಯಲ್ಲಿ ನೇಮಕಾತಿ/ 6800 ಹುದ್ದೆಗಳಿಗೆ ಸರ್ಕಾರದಿಂದ ಅನುಮತಿ

ಸಮಗ್ರ ನ್ಯೂಸ್: ಕೆ ಎಸ್‍ ಆರ್ ಟಿ ಸಿ ಯಲ್ಲಿ 6500 ಚಾಲನಾ ಸಿಬ್ಬಂದಿ ಮತ್ತು 300 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರೆತಿದೆ. ಇದರಲ್ಲಿ 1619 ಚಾಲನಾ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದೆ. 2024ರ ಜನವರಿಯಲ್ಲಿ ಅಂತಿಮ ಪಟ್ಟಿ ಬಿಡುಗಡೆಗೊಳ್ಳಲಿದೆ. ಇದರ ಜೊತೆಗೆ 300 ನಿರ್ವಾಹಕರ ಹುದ್ದೆ ನೇಮಕಾತಿಗೆ ಅನುಮತಿ ಸಿಕ್ಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿ ಇದೆ.

Ad Widget ... ..

ಸಾರಿಗೆ ಸಂಸ್ಥೆಗಳಲ್ಲಿ 2016ರಿಂದ ಇಲ್ಲಿಯವರೆಗೆ ನಿವೃತ್ತಿ ಮತ್ತು ಇತರೆ ಕಾರಣದಿಂದ ಖಾಲಿಯಾಗಿದ್ದ ಹುದ್ದೆಗಳನ್ನು ಭರ್ತಿ ಮಾಡಲಾಗಿರಲಿಲ್ಲ. ಹೀಗಾಗಿ 13,669 ಹುದ್ದೆಗಳು ಖಾಲಿ ಆಗಿದ್ದು 13 ಸಾವಿರ ಸಿಬ್ಬಂದಿ ನೇಮಕಾತಿಗೆ ನಿಗಮದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು.

Ad Widget

Leave a Comment

Your email address will not be published. Required fields are marked *