Ad Widget .

ಸುರತ್ಕಲ್:ರಕ್ತದಾನ ಮಹಾದಾನ-ಡಾ. ಕೆ.ವಿ. ಪ್ರಕಾಶ್|ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ

ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ

Ad Widget . Ad Widget .

ಸುರತ್ಕಲ್: ವೆನ್ಲಾಕ್ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಪಣಂಬೂರಿನ ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರವು ಆದಿತ್ಯವಾರ ಬೆಳಗ್ಗೆ ಪಣಂಬೂರು ಎನ್ ಎಂಪಿಎ ಆಫೀಸರ್ಸ್ ಕ್ಲಬ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಸಿ ಮಾತಾಡಿದ ಡಾ. ಕೆ.ವಿ. ಪ್ರಕಾಶ್ ಅವರು, “ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ನಂತಹ ಸಾಮಾಜಿಕ ಸಂಘಟನೆಗಳು ರಕ್ತದಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಬಹುದು. ರಕ್ತವನ್ನು ದಾನ ಮಾಡುವ ಮೂಲಕ ಅಗತ್ಯವಿರುವವರಿಗೆ ನೇರವಾಗಬಹುದು. 18ರಿಂದ 60 ವರ್ಷದೊಳಗಿನವರು ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳನ್ನು ನಿಯಂತ್ರಿಸಬಹುದು. ಯುವಜನರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪುಣ್ಯಕಾರ್ಯದಲ್ಲಿ ತೊಡಗಿಕೊಳ್ಳಬೇಕು” ಎಂದರು.
ಬಳಿಕ ಮಾತಾಡಿದ ವೈದ್ಯ ಆಂಟನಿ ಅವರು, “ಒಬ್ಬ ಅರೋಗ್ಯವಂತ ವ್ಯಕ್ತಿ ಎಷ್ಟು ಸಾರಿ ಬೇಕಾದರೂ ರಕ್ತದಾನ ಮಾಡಬಹುದು. ಅದರಿಂದ ಆತನ ಪ್ರಾಣಕ್ಕೆ ಯಾವುದೇ ಸಂಚಕಾರ ಬರುವುದಿಲ್ಲ. ಈಗ ಎಲ್ಲಾ ಕಡೆಗಳಲ್ಲಿ ಡೆಂಗ್ಯೂ ರೋಗ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ರಕ್ತದ ಪ್ಲೇಟ್ಲೆಟ್ ಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ನೀವು ಮಾಡುವ ರಕ್ತದಾನ ಅದೆಷ್ಟೋ ಜನರಿಗೆ ನೆರವಾಗುತ್ತದೆ” ಎಂದರು.
ಅಧ್ಯಕ್ಷ ವಿಜಯ ಕುಮಾರ್ ದಾಸ್ ಮಾತನಾಡಿ, “ನಮ್ಮ ಸಂಘಟನೆ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ಸದ್ಯದ ಸ್ಥಿತಿಯಲ್ಲಿ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ಲೆಟ್ ಅಗತ್ಯತೆ ಇರುವುದನ್ನು ಮನಗಂಡು ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜನೆ ಮಾಡುತ್ತಿದ್ದೇವೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದರು.
ವೇದಿಕೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ವೈದ್ಯೆ ಡಾ. ಸೆಲ್ವಿ, ಡಾ.ಕೆ.ವಿ. ಪ್ರಕಾಶ್, ಗೋಲ್ಡನ್ ಈಗಲ್ ಸಂಘಟನೆಯ ಅಧ್ಯಕ್ಷ ವಿಜಯ ಕುಮಾರ್ ದಾಸ್, ವೈದ್ಯ ಆಂಟನಿ, ಡಾ.ಅಸುತೋಷ್, ಸಂಘಟನೆಯ ಕಾರ್ಯದರ್ಶಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ರಾಹುಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Ad Widget . Ad Widget .

Leave a Comment

Your email address will not be published. Required fields are marked *