Ad Widget .

ಕೊಯಮತ್ತೂರು: ನದಿಯಲ್ಲಿ ಮುಳುಗಿ 5 ವಿದ್ಯಾರ್ಥಿಗಳು ಮೃತ್ಯು

ಸಮಗ್ರ ನ್ಯೂಸ್: ನದಿಯಲ್ಲಿ ಈಜಲು ತೆಳಿದ್ದ ಇಬ್ಬರು ಅಣ್ಣ-ತಮ್ಮ ಸೇರಿ ಐವರು ಕಾಲೇಜು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ (Coimbatore) ಕೊಯಮತ್ತೂರಿನಲ್ಲಿ ನಡೆದಿದೆ.

Ad Widget . Ad Widget .

ಕೊಯಮತ್ತೂರಿನ ಕಿನತುಕಡವು ಪ್ರದೇಶದ 10 ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ವಾಲ್ಪಾರೈ ಬಳಿಕ ಕೂಲಂಗಲ್ ನದಿಯ ಬಳಿ ಬಂದಿದ್ದು ನಂತರ ನದಿಗೆ ಇಳಿದಿದ್ದು, ಐವರು ಮುಳುಗಿ ಮೃತಪಟ್ಟಿದ್ದಾರೆ. ನದಿಯಲ್ಲಿ ಆಳ ಇದ್ದು, ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget . Ad Widget .

ಶರತ್ (20) ನದಿಯ ಆಳವಾದ ಭಾಗಕ್ಕೆ ಹೋಗಿ ಸುರುಳಿಯಲ್ಲಿ ಸಿಲುಕಿದ್ದಾನೆ. ನಂತರ ನಬಿಲ್ ಅರ್ಸಾದ್ (20), ಧನುಷ್ ಕುಮಾರ್ (20), ಹಾಗೂ ಅವರನ್ನು ರಕ್ಷಿಸಲು ಹೋದ ಅಜಯ್ (20) ಮತ್ತು ವಿನಿತ್ ಕುಮಾರ್ (23) ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾಹಿತಿ ಪಡೆದ ವಾಲ್ಪಾರೈ ಅಗ್ನಿಶಾಮಕ ಠಾಣೆ ಅಧಿಕಾರಿ, ಹಾಗೂ ಏಳು ಸದಸ್ಯರ ತಂಡ ಕಾರ್ಯಾಚರಣೆ ನಡೆಸಿ ಐವರ ಶವಗಳನ್ನು ಮೇಲೆಕ್ಕೆತ್ತಿದ್ದಾರೆ. ಈ ಬಗ್ಗೆ ವಾಲ್ಪಾರೈ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *