ಸಮಗ್ರ ನ್ಯೂಸ್:ಸುಳ್ಯದ ಗಾಂಧಿನಗರದಲ್ಲಿ 24 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಂದಾ ಎಲೆಕ್ಟ್ರಾನಿಕ್ಸ್ ಈಗ ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಚೆನ್ನಕೇಶವ ದೇವಸ್ಥಾನದ ಹತ್ತಿರ ಇರುವ ಆಶೀರ್ವಾದ ಕಾಂಪ್ಲೆಕ್ಸ್ ಗೆ ಅ.20 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಾಲಕ ಸತ್ಯಾನಂದ ಕುರುಂಜಿ ಹಾಗೂ ಮನೆಯವರು, ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.