ವಿಟ್ಲದ ಕೊಟ್ಟಾರಿಕಟ್ಟೆ ಬಸ್ ನಿಲ್ದಾಣದಲ್ಲಿ ದನದ ಕಿವಿ!! ಗೋಮಾತೆಯ ಮೇಲೆ ವಿಕೃತಿ ಮೆರೆದವರಿಗೆ ಶೋಧ

ಸಮಗ್ರ ನ್ಯೂಸ್: ದುಷ್ಕರ್ಮಿಗಳು ದನದ ಕಿವಿ ಕತ್ತರಿಸಿ ಬಿಸಾಕಿದ ಘಟನೆ‌ ವಿಟ್ಲದ ಕೆಲಿಂಜ ಕೊಟ್ಟಾರಿ ಕಟ್ಟೆ ಬಸ್ಸು ನಿಲ್ದಾಣದ ಬಳಿ ಅ. 20 ರಂದು ಬೆಳಕಿಗೆ ಬಂದಿದೆ.

Ad Widget ... ..

ವೀರಕಂಭ ಗ್ರಾಮದ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ಅ. 20ರಂದು ಮುಂಜಾನೆ ಕತ್ತರಿಸಿದ ದನದ ಕಿವಿ ಮತ್ತು ಚರ್ಮ ಪತ್ತೆಯಾಗಿದೆ. ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿದ್ದು, ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget

ನಾಡಹಬ್ಬ ದಸರಾ ಮತ್ತು ನವರಾತ್ರಿ ಸಂದರ್ಭದಲ್ಲಿ ದುಷ್ಕರ್ಮಿಗಳು ಕೋಮು ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಭಜರಂಗದಳ ಕೆಲಿಂಜ ಘಟಕ ಆರೋಪಿಸಿದೆ.

Leave a Comment

Your email address will not be published. Required fields are marked *