ಸಮಗ್ರ ನ್ಯೂಸ್:ಸುಳ್ಯ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ನೀಡಲಾದ ವಾಟರ್ ಬೆಡ್ ಮತ್ತು ವೀಲ್ ಚೇರ್ ಅನ್ನು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಸುಳ್ಯ ತಾಲೂಕಿನ ಐವರ್ನಾಡು ಒಕ್ಕೂಟದ ಕೋಡ್ತಿಲು ಸ್ವರ್ಣಗೌರಿ ಸಂಘದ ಸದಸ್ಯ ಮಲ್ಲು ರವರ ತಾಯಿ ಚೋಮು ಅವರಿಗೆ ಹಾಗೂ ಐವರ್ನಾಡು ಗ್ರಾಮದ ಪಾಲೇಪ್ಪಾಡಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರರವರ ತಾಯಿ ಸೀತಮ್ಮ ಅವರಿಗೆ ವಾಟರ್ ಬೆಡ್ ಮತ್ತು ಶ್ರೀ ಲಕ್ಷ್ಮೀ ಸ್ವ ಸಹಾಯ ಸಂಘದ ಸದಸ್ಯೆ ಸುಮಿತ್ರ ಅವರ ಅತ್ತೆ ಹೇಮಾವತಿ ಅವರಿಗೆ ವಿಲ್ ಚೇರ್ ಹಸ್ತಾಂತರಿಸಲಾಯಿತು.
ಈ ಸಂಧರ್ಭ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಪದಾಧಿಕಾರಿ ಪುಷ್ಪ, ರಾಧ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವನಿತಾ, ಯಶೋಧ ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.