Ad Widget .

ನವರಾತ್ರಿ ನವದುರ್ಗೆ| ಕಾತ್ಯಾಯಿನಿ ದೇವಿಯ ಆರಾಧನೆ; ಜನ್ಮಾಂತರಗಳ ಪಾಪ ನಿವಾರಣೆ

ಸಮಗ್ರ ನ್ಯೂಸ್: ನವರಾತ್ರಿಯ 6ನೇ ದಿನ ಕಾತ್ಯಾಯಿನಿ ಮಾತೆಯ ಪೂಜೆ ಮಾಡಲಾಗುತ್ತದೆ. ಇಂದ್ರಾಕ್ಷಿ ಮಹಾ ಮಂತ್ರದಲ್ಲಿ ಬರುವ ಮತ್ತೊಂದು ಹೆಸರೇ ಕಾತ್ಯಾಯಿನಿ. ನವರಾತ್ರಿಯ ಆರನೇ ದಿನದಂದು ನಾವು ಈ ದೇವಿಯ ಪೂಜೆಯನ್ನು ಮಾಡುತ್ತೇವೆ. ಪ್ರಮುಖವಾಗಿ ಈಕೆಯ ಪೂಜೆಯಿಂದ ಮನೆಗೆ ಅಥವಾ ವ್ಯಕ್ತಿಗೆ ಆಗಿರುವ ದೃಷ್ಟಿ ದೋಷವು ನಿವಾರಣೆಯಾಗುತ್ತದೆ.

Ad Widget . Ad Widget .

ಪುರಾಣ ಗ್ರಂಥಗಳ ಅನ್ವಯ ಕತಾ ಎಂಬ ಋಷಿ ಒಬ್ಬರಿದ್ದರು. ಅವರಿಗೆ ಗಂಡು ಸಂತಾನವಾಯಿತು. ಆತನ ಹೆಸರೇ ಕಾತ್ಯಾ. ಇವರ ಗೋತ್ರದಲ್ಲಿ ಮಹರ್ಷಿ ಕಾತ್ಯಾಯನರು ಹುಟ್ಟುತ್ತಾರೆ. ದುರ್ಗೆ ಮೇಲೆ ಅಪಾರ ಭಕ್ತಿಇರುವ ಇವರು ಅನೇಕ ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾರೆ. ಇವರ ಮನದಲ್ಲಿದ್ದ ಒಂದೇ ಒಂದು ಅಭಿಲಾಷೆ ಎಂದರೆ ಸಾಕ್ಷಾತ್ ಪಾರ್ವತಿಯೇ ಇವರ ಮನೆಯಲ್ಲಿ ಮಗಳಾಗಿ ಜನಿಸಬೇಕು ಎಂಬುದು.

Ad Widget . Ad Widget .

ದಿನ ಕಳೆದಂತೆ ರಾಕ್ಷಸನಾದ ಮಹಿಷಾಸುರನ ತೊಂದರೆಗಳು ಹೆಚ್ಚಾಗುತ್ತದೆ. ಆಗ ಸ್ವತಃ ಬ್ರಹ್ಮ, ವಿಷ್ಣು, ಮಹೇಶ್ವರ ಅಲ್ಲದೆ ಸಕಲ ದೇವಾನುದೇವತೆಗಳು ತಮ್ಮಲ್ಲಿರುವ ತೇಜಸ್ಸನ್ನು ಧಾರೆಗೆರೆಯುತ್ತಾರೆ. ಇದರ ಪ್ರಭಾವದಿಂದ ಓರ್ವ ಜೀವಿಯ ಉತ್ಪನ್ನವಾಗುತ್ತದೆ. ಮೊಟ್ಟಮೊದಲು ಈ ದೇವಿಯ ಪೂಜೆ ಮಾಡಿದವರೆ ಮಹರ್ಷಿ ಕಾತ್ಯಾಯನರು. ಈ ಕಾರಣದಿಂದಾಗಿ ಈ ದೇವಿಗೆ ಕಾತ್ಯಾಯಿನಿ ಎಂಬ ಹೆಸರು ಬಂದಿದೆ.

ಕೆಲವೊಂದು ಗ್ರಂಥಗಳ ಪ್ರಕಾರ ಕಾತ್ಯಾಯನರ ಪುತ್ರಿಯಾಗಿ ಅವತರಿಸಿದಳು ಎಂದು ತಿಳಿದು ಬರುತ್ತದೆ. ಧಾರ್ಮಿಕ ಕಥೆಗಳ ಪ್ರಕಾರ ಈಕೆಯು ನವರಾತ್ರಿಯ ಸಪ್ತಮಿ, ಅಷ್ಟಮಿ ಮತ್ತು ನವಮಿ ದಿನಗಳನ್ನು ಪೂಜೆಯನ್ನು ಸ್ವೀಕರಿಸಿ ವಿಜಯ ದಶಮಿಯಂದು ಮಹಿಷಾಸುರನ ಸಂಹಾರ ಮಾಡಿದಳು ಎಂದು ತಿಳಿಯಲ್ಪಡುತ್ತದೆ . ಅತ್ಯಂತ ಭವ್ಯರೂಪದ ಈಕೆ ಭಕ್ತಾದಿಗಳಿಗೆ ಹೊಸ ಚೇತನವಾಗುತ್ತಾಳೆ. ಇವಳಿಗೆ ಬಂಗಾರದ ಬಣ್ಣವಿರುತ್ತದೆ. ನಾಲ್ಕು ಕೈಗಳಿದ್ದು ಆ ಕೈಗಳಲ್ಲಿ ಅಭಯ ಮುದ್ರೆ, ವರ ಮುದ್ರೆ, ಖಡ್ಗ ಮತ್ತು ಕಮಲದ ಹೂವು ಇರುತ್ತದೆ. ಎಲ್ಲಾ ದುರ್ಗಾವತಾರದ ವಾಹನದಂತೆ ಈಕೆಯ ವಾಹನವು ಸಿಂಹವಾಗಿದೆ. ಭಕ್ತರು ತಮ್ಮೆಲ್ಲ ಚೇತನವನ್ನು ಈಕೆಗೆ ಅರ್ಪಿಸುತ್ತಾರೆ. ಈಕೆಯ ಪೂಜೆಯಿಂದ ಅರಿಷಡ್ವರ್ಗಗಳು ದೂರವಾಗುತ್ತವೆ. ಈಕೆಯ ಆರಾಧನೆಯಿಂದ ಜನ್ಮ ಜನ್ಮಾಂತರದ ಪಾಪವು ನಶಿಸಿ ಹೋಗುತ್ತದೆ. ಒಳ್ಳೆಯ ಮನಸ್ಸಿದ್ದರೆ, ಒಳ್ಳೆಯ ಭಕ್ತಿ ಭಾವನೆ ಇದ್ದರೆ ಈಕೆಯಿಂದ ಸಾಕ್ಷಾತ್ಕಾರ ಲಭ್ಯವಾಗುತ್ತದೆ.

ಕಾತ್ಯಾಯನಿ ಆವಾಸಸ್ಥಾನವು ಕೋಸಿ ನದಿಯ ದಡದಲ್ಲಿ, ಬದ್ಲಾಘಾಟ್ ಮತ್ತು ಧಮರಾಘಾಟ್ ನಿಲ್ದಾಣಗಳ ನಡುವೆ ನೆಲೆಸಿದೆ, ಕಾತ್ಯಾಯನಿಯ ದೇವಾಲಯಗಳು, ರಾಮ, ಲಕ್ಷ್ಮಣ ಮತ್ತು ಮಾ ಜಾನಕಿ ದೇವಾಲಯಗಳು ಈ ಸ್ಥಳದಲ್ಲಿ ನೆಲೆಗೊಂಡಿವೆ. ಕೆಲವು ಭಕ್ತರು ಕಾತ್ಯಾಯನಿಯನ್ನು ಸಿದ್ಧ ಪೀಠವೆಂದು ಪೂಜಿಸುತ್ತಾರೆ. ಅದಕ್ಕಾಗಿಯೇ ಭಕ್ತರು ದೇವರಿಗೆ ಹಸಿ ಹಾಲನ್ನು ಅರ್ಪಿಸುತ್ತಾರೆ.

Leave a Comment

Your email address will not be published. Required fields are marked *