Ad Widget .

ವಿರಾಟದರ್ಶನಕ್ಕೆ ಬಾಂಗ್ಲಾ ತತ್ತರ| ಟೀಂ ಇಂಡಿಯಾಗೆ ಮತ್ತೊಂದು ಗೆಲುವು

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿ ಶತಕದ ಅಪರೂಪದ ಹಣಾಹಣಿಗೆ ಪುಣೆ ಪ್ರೇಕ್ಷಕರು ಸಾಕ್ಷಿಯಾದದರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.

Ad Widget . Ad Widget .

ಈ ಗೆಲುವಿನ ಬೆನ್ನತ್ತಿದ ಟೀಂ ಇಂಡಿಯಾಗೆ ಎಂದಿನಂತೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಕೇವಲ 40 ಎಸೆತಗಳಲ್ಲಿ 48 ರನ್ ಗಳಿಸಿದ ರೋಹಿತ್ ಪುಲ್ ಶಾಟ್ ಹೊಡೆಯುವ ಭರದಲ್ಲಿ ಔಟಾದರು.

Ad Widget . Ad Widget .

ಇನ್ನೊಂದೆಡೆ ತಾಳ್ಮೆಯ ಆಟಕ್ಕೆ ಕೈ ಹಾಕಿದ ಶುಬ್ಮನ್ ಗಿಲ್ 53 ರನ್ ಗಳಿಸಿ ಔಟಾದರು. ಆದರೆ ಕೊನೆಯ ಹಂತದಲ್ಲಿ ಕೊಹ್ಲಿ ಶತಕ ಮತ್ತು ಟೀಂ ಇಂಡಿಯಾ ಗೆಲುವಿನ ಪೈಪೋಟಿ ರೋಚಕವಾಗಿತ್ತು. ತಂಡದ ಗೆಲುವಿಗೆ 15 ರನ್ ಬೇಕಾಗಿದ್ದಾಗ ಕೊಹ್ಲಿ ಶತಕಕ್ಕೂ 15 ರನ್ ಬೇಕಾಗಿತ್ತು. ಈ ವೇಳೆ ಕೊಹ್ಲಿ ಒಂದು ಸಿಕ್ಸರ್ ಸಿಡಿಸಿದರು. ಆಗ ತಂಡದ ಗೆಲುವು ಮತ್ತು ಕೊಹ್ಲಿ ಶತಕಕ್ಕೆ 9 ರನ್ ಬೇಕಾಗಿತ್ತು. ಆ ಓವರ್ ನ ಕೊನೆಯ ಎಸೆತದಲ್ಲಿ ಸಿಂಗಲ್ಸ್ ತೆಗೆಯುವ ಮೂಲಕ ಕೊಹ್ಲಿ ಮುಂದಿನ ಓವರ್ ನಲ್ಲಿ ಬ್ಯಾಟಿಂಗ್ ಕಾಯ್ದುಕೊಂಡರು.

41 ನೆಯ ಓವರ್ ನಲ್ಲಿ ಎರಡನೆಯ ಎಸೆತ ವೈಡ್ ಆದಾಗ ಕೊಹ್ಲಿ ಕೊಂಚ ವಿಚಲಿತರಾದರು. ಮುಂದಿನ ಎಸೆತವನ್ನು ಚುರುಕಾಗಿ ಓಡಿ ಕೊಹ್ಲಿ ಎರಡು ರನ್ ಗಳಿಸಿದರು. ಆಗ ಭಾರತಕ್ಕೆ 5 ಕೊಹ್ಲಿಗೆ 6 ರನ್ ಬೇಕಾಗಿತ್ತು. ಈ ವೇಳೆ ಬಾಂಗ್ಲಾ ಬೌಲರ್ ಮಹಮೂದ್ ವೈಡ್ ಎಸೆತದ ಮೂಲಕ ಕೊಹ್ಲಿ ಶತಕಕ್ಕೆ ಅಡ್ಡಿಪಡಿಸುವ ಆತಂಕ ತಂದರೂ ಮರು ಓವರ್ ನ ಮೂರನೇ ಎಸೆತವನ್ನು ಸಿಕ್ಸರ್ ಗಟ್ಟಿದ ಕೊಹ್ಲಿ ಶತಕದ ಜೊತೆಗೆ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು. ಇದು ಕೊಹ್ಲಿಯ 48 ನೇ ಏಕದಿನ ಶತಕವಾಗಿತ್ತು. ವಿಶೇಷವೆಂದರೆ ಇನ್ನೊಂದು ತುದಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂತಹದ್ದೇ ಸಂದರ್ಭದಲ್ಲಿ ಶತಕ ಗಳಿಸಲಾಗದೇ 97 ರನ್ ಗಳಿಗೆ ಅಜೇಯರಾಗುಳಿದಿದ್ದ ಕೆಎಲ್ ರಾಹುಲ್ ಇದ್ದಿದ್ದು ವಿಶೇಷ. ಅಂತಿಮವಾಗಿ ಭಾರತ 41.3 ಓವರ್ ಗಳಲ್ಲಿ 261 ರನ್ ಗಳಿಸಿತು.

Leave a Comment

Your email address will not be published. Required fields are marked *