ಸಮಗ್ರ ನ್ಯೂಸ್: ಡ್ರ್ಯಾಗನ್ ಫ್ರೂಟ್ ರುಚಿಕರ ಮಾತ್ರವಲ್ಲದೆ ತುಂಬಾ ಪೌಷ್ಟಿಕವಾಗಿದೆ. ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಡ್ರ್ಯಾಗನ್ ಹಣ್ಣು ಆರೋಗ್ಯವನ್ನು ಮಾತ್ರವಲ್ಲದೆ ಸೌಂದರ್ಯವನ್ನೂ ಸುಧಾರಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಹಣ್ಣಿನಲ್ಲಿರುವ ಸೌಂದರ್ಯದ ರಹಸ್ಯ ಏನು ತಿಳ್ಕೊಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಡ್ರ್ಯಾಗನ್ ಫ್ರೂಟ್: ವಿಟಮಿನ್ ಇ, ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಿ ಹೊಳೆಯುವ ಮೈಬಣ್ಣವನ್ನು ನೀಡುತ್ತವೆ.
1,ಡ್ರ್ಯಾಗನ್ ಫ್ರೂಟ್ ಹೈಡ್ರೇಟಿಂಗ್ ಗುಣಗಳನ್ನು ಹೊಂದಿದೆ. ಡ್ರ್ಯಾಗನ್ ಫ್ರೂಟ್ ತಿರುಳನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಮುಖವು ಸ್ವಾಭಾವಿಕವಾಗಿ ತೇವಾಂಶದಿಂದ ಕೂಡಿರುತ್ತದೆ.
2.ಡ್ರ್ಯಾಗನ್ ಫ್ರೂಟ್‌ನಲ್ಲಿರುವ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಮತ್ತು ವಿಟಮಿನ್ ಸಿ ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ. ಈ ಪ್ರಕ್ರಿಯೆಯು ಸುಕ್ಕುಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಬಿಗಿಗೊಳಿಸುತ್ತದೆ.
3.ಡ್ರಾಗನ್ ಹಣ್ಣನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಫೇಸ್ ಪ್ಯಾಕ್: ಡ್ರ್ಯಾಗನ್ ಫ್ರೂಟ್ ಅನ್ನು ರುಬ್ಬಿಕೊಳ್ಳಿ ಮತ್ತು ಕಡಲೆ ಹಿಟ್ಟು, ರೋಸ್ ವಾಟರ್ ಮತ್ತು ಹಸಿ ಹಾಲು ಸೇರಿಸಿ. ಪೇಸ್ಟ್ ಮಾಡಿ ಮತ್ತು ಕುತ್ತಿಗೆ ಮತ್ತು ಮುಖದ ಮೇಲೆ ಲೇಪಣ ಮಾಡಿ 20 ನಿಮಿಷಗಳ ಕಾಲ ಹಾಗೆ ಬಿಡಬೇಕು. ನಂತರ ಬೆರಳುಗಳಿಂದ ಮಸಾಜ್ ಮಾಡಿ, ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ಮುಖ ಪಳಪಳ ಹೊಳೆಯುತ್ತದೆ.
(ಸಂಗ್ರಹ)