Ad Widget .

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ| ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದ ವ್ಯಕ್ತಿ!!

ಸಮಗ್ರ ನ್ಯೂಸ್: ಬೆಂಗಳೂರಿ‌ನ ಕೋರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8ರಿಂದ 10 ಸಿಲಿಂಡರ್​ಗಳು ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದಾರೆ. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿದೆ.

Ad Widget . Ad Widget . Ad Widget .

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಾಲ್ಕು ಮಹಡಿಯ ​ಕಟ್ಟಡದಲ್ಲಿ, ಗ್ರೌಂಡ್ ಮತ್ತು ಮೊದಲ ಮಹಡಿಯಲ್ಲಿ ಕಾರು ಷೋ ರೂಂ ಇದೆ. ಎರಡು ಮತ್ತು ಮೂರನೇ ಮೂರನೇ ಮಹಡಿಯಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆರನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿತಿತ್ತು. ಬೆಂಕಿ ಐದನೇ ಮಹಡಿಗೂ ಆವರಿಸಿತ್ತು. ಅಲ್ಲಿ ಸದ್ಯ ಯಾರು ಇರಲಿಲ್ಲ. ಒಟ್ಟು ಆರು ಗ್ಯಾಸ್ ಸಿಲಿಂಡರ್​ಗಳಿದ್ದವು. ನಾಲ್ಕು ಬ್ಲಾಸ್ಟ್ ಆಗಿವೆ, ಇನ್ನು ಎರಡು ಸಿಲೆಂಡರ್​​ಗಳು ಬ್ಲಾಸ್ಟ್​ ಆಗದ ಹಾಗೆ ಮಾಡಿದ್ದೇವೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಬ್ಲಾಸ್ಟ್ ಗೊತ್ತಾಗುತ್ತಿದ್ದಂತೆ ಕಟ್ಟಡ ಅಂಚಿಗೆ ಬಂದಿದ್ದಾನೆ. ನಂತರ ಬೆಂಕಿಗೆ ಸುಟ್ಟು ಹೋಗುತ್ತೇನೆ ಎಂದು ಕೆಳಗೆ ಹಾರಿದ್ದಾನೆ. ಹುಕ್ಕಾ ಬಾರ್​ನಲ್ಲಿ ಇದ್ದ ಸಿಲಿಂಡರ್​ನಿಂದ ಇಷ್ಟೆಲ್ಲಾ ದುರಂತ ಆಗಿದೆ. ರೂಫ್ ಟಾಪ್ ಸಂಪೂರ್ಣ ಭಸ್ಮವಾಗಿದೆ. ಫರ್ನಿಚರ್ ಮತ್ತು ಬೆಂಡುಗಳಿಂದ ಡೆಕೋರೆಶನ್ ಮಾಡಲಾಗಿತ್ತು ಹೀಗಾಗಿ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬಂದಾಗ ಪಕ್ಕದ ಕಟ್ಟಡಕ್ಕೆ ಬೆಂಕಿ ಆವರಿಸಿಕೊಳ್ಳುತಿತ್ತು. ಈ ವೇಳೆ ಮೊದಲಿಗೆ ಪಕ್ಕದಕಟ್ಟಡ ಬೆಂಕಿ ನಂದಿಸಿ ನಂತರ ಬೆಂಕಿ ಹೊತ್ತಿದ್ದ ಕಟ್ಟಡ ಬೆಂಕಿಯನ್ನು ಹತೋಟಿಗೆ ಪಡೆದಿದ್ದಾರೆ. ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗೆ ತಿಲಕ್​​ ನಗರದ ಕೆಜಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರೆಸ್ಟೋರೆಂಟ್​​​ ಇದೆ. ರೆಸ್ಟೋರೆಂಟ್​ನ ಕೊಠಡಿಯಲ್ಲಿ 8-10 ಸಿಲಿಂಡರ್​ ಸಂಗ್ರಹಿಸಲಾಗಿತ್ತು. ಸಿಲಿಂಡರ್​​ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿರುವ ಮಾಹಿತಿ ದೊರೆತಿದೆ ಎಂದು ಅಗ್ನಿಶಾಮಕ ದಳ ಎಡಿಜಿಪಿ ಹರಿಶೇಖರನ್ ಹೇಳಿದ್ದಾರೆ.

Leave a Comment

Your email address will not be published. Required fields are marked *