ಸಮಗ್ರ ನ್ಯೂಸ್: ಮಿಂಚು, ಗುಡುಗಿನಿಂದ ಸುರಿದ ಭಾರೀ ಮಳೆಯಿಂದ ಕರಾವಳಿಯ ಹಲವೆಡೆ ಸಿಡಿಲಾಘಾತ ಉಂಟಾಗಿ ವ್ಯಾಪಕ ಹಾನಿ ಸಂಘವಿಸಿದೆ.
ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ಹಿತ್ತಲಗದ್ದೆ ನಿವಾಸಿ ರಂಜಿತಾ ಜಗದೀಶ ಗೌಡ ಇವರೇ ಸಿಡಿಲಿನ ಆಘಾತಕ್ಕೆ ಒಳಗಾದ ಮಹಿಳೆಯಾಗಿದ್ದು ಇವರನ್ನು ಕೂಡಲೇ ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರು ಹೊರವಲಯದ ವಾಮಂಜೂರು ಅಮೃತ ನಗರದ ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ಸಿಡಿಲಿನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ಸಿಡಿಲಿನ ಸದ್ದಿಗೆ ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿನ ಕಿವಿಗೆ ಹಾನಿಯಾಗಿದೆ.
ಸಿಡಿಲಿನ ಸದ್ದಿಗೆ ಮಹಿಳೆ ಶ್ವೇತಾ ಹಾಗೂ ಮಗುವಿನ ಕಿವಿಗೆ ಹಾನಿಯಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಳ್ಯ ತಾಲೂಕಿನ ಮರ್ಕಂಜ ಸಮೀಪದ ಸೇವಾಜೆ ಎಂಬಲ್ಲಿ ಸಿಡಿಲಿನ ಹೊಡೆತಕ್ಕೆ ಮನೆಯೊಂದರ ಇನ್ವರ್ಟರ್ ಸ್ಪೋಟಗೊಂಡಿದೆ. ಚಂದ್ರಶೇಖರ ಎಂಬವರ ಮನೆಯಲ್ಲಿ ಘಟನೆ ಸಂಭವಿಸಿದ್ದು, ಮನೆಯ ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ. ಅರಂಬೂರು ಎಂಬಲ್ಲಿ ಮನೆ ಮತ್ತು ಕೊಟ್ಟಿಗೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಒಟ್ಟಾರೆ ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ಅನಾಹುತ ಸಂಭವಿಸಿದೆ. ಮಳೆ ಇಂದೂ ಕೂಡಾ ಮುಂದುವರಿಯುವ ಲಕ್ಷಣಗಳು ಕಮಡುಬರುತ್ತಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.