Ad Widget .

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ| ಯುವಕ ಬಂಧನ

ಸಮಗ್ರ ನ್ಯೂಸ್: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪದಡಿ ಯುವಕನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ.

Ad Widget . Ad Widget .

ಕಡಬ ಪಿಜಕ್ಕಳ ನಿವಾಸಿ ಯಜ್ಞೇಶ್‌ ಪೋಕ್ಸೊ ಕಾಯ್ದೆಯಡಿ ಬಂಧನವಾದ ಆರೋಪಿ. ಕೆಲ ತಿಂಗಳುಗಳ ಹಿಂದೆ ಆರೋಪಿಯು ಬಾಲಕಿಯನ್ನು ಮಡಿಕೇರಿಯ ಲಾಡ್ಜ್‌ ವೊಂದಕ್ಕೆ ಕರೆದುಕೊಂಡು ಹೊಗಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿದ ಹಿನ್ನಲೆಯಲ್ಲಿ ಆಕೆ ಕಲಿಯುತ್ತಿದ್ದ ಶಾಲೆಯ ಶಿಕ್ಷಕಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಪೊಲೀಸ್‌ ಪ್ರಕರಣ ದಾಖಲಾಗಿರುವುದು, ಆರೋಪಿಯ ಬಂಧನವನ್ನು ಖಚಿತಪಡಿಸಿದರೂ ದೂರಿನ ವಿವರಗಳ ಬಗ್ಗೆ ಯಾವುದೇ ಮಾಹಿತಿ ಒದಗಿಸಿರುವುದಿಲ್ಲ.

Ad Widget . Ad Widget .

ಆರೋಪಿಯು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಪ್ರಕರಣ ದಾಖಲಾಗುತ್ತಲೇ ಬೆಂಗಳೂರಿಗೆ ತೆರಳಿದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮಡಿಕೇರಿಗೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ ಲಾಡ್ಜ್‌ ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ

Leave a Comment

Your email address will not be published. Required fields are marked *