Ad Widget .

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಗೌರವ ಡಾಕ್ಟರೇಟ್| ಬೆಂಗಳೂರು ವಿ.ವಿ ಘಟಿಕೋತ್ಸವದಲ್ಲಿ ಗೌರವಾರ್ಪಣೆ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

Ad Widget . Ad Widget .

ಇಂದು(ಅಕ್ಟೋಬರ್ 17) ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಿಲಾಗಿದೆ. ಇನ್ನು ದೇವೇಗೌಡ ಅವರು ಸಹ ಡಾಕ್ಟರೇಟ್ ಪದವಿ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

Ad Widget . Ad Widget .

ವಿದ್ಯೆ ಕಾಗದದ ಸರ್ಟಿಫಿಕೇಟ್ ಆಗಬಾರದು. ವಿದ್ಯೆ ಸಂಸ್ಕಾರವನ್ನು ಒಳಗೊಂಡಿರಬೇಕು. ಶಿಕ್ಷಣ ಪುಸ್ತಕ ಜ್ಞಾನ, ಅಕ್ಷರ ಜ್ಞಾನ ಮಾತ್ರ ಅಲ್ಲ ವಿದ್ಯೆ ಹೃದಯವಂತಿಕೆ ಬೆಳೆಸಬೇಕು. ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಸಂದಿರುವುದು ಸಂತಸ ತಂದಿದೆ. ಇಸ್ರೋದ ಸಂಸ್ಥೆ ಇಂದು ಬಾಹ್ಯಕಾಶ ಕ್ಷೇತ್ರ ಭೂಪಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿ ಗೌರವ ತಂದಿದೆ. ವಿದ್ಯಾರ್ಥಿ ಜೀವನ ತಪ್ಪಸ್ಸು ಇದ್ದಂತೆ. ವಿದ್ಯೆ ಒಬ್ಬನ ಜೀವನ ಕಟ್ಟಿಕೊಳ್ಳವುದು ಮಾತ್ರವಲ್ಲ, ದೇಶವನ್ನು ಸಮಾಜವನ್ನು ಕಟ್ಟುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ತುಂಬಾ ಸಂತೋಷದಿಂದ ನಾನು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *