Ad Widget .

ಸುಳ್ಯ: ಕಲ್ಪಡ ಮೊವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕುಣಿತ ಭಜನೆ ಕಾರ್ಯಕ್ರಮ

ಸಮಗ್ರ ನ್ಯೂಸ್:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಡಿಯಾಲ ‘ಎ’ ಅಧ್ಯಕ್ಷರು ಪದಾಧಿಕಾರಿಗಳ ಸಹಕಾರದೊಂದಿಗೆ ಅ. 17ರಂದು ಕಲ್ಪಡ ಮೊವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ “ಕುಣಿತ ಭಜನೆ” ಕಾರ್ಯಕ್ರಮ ನಡೆಯಿತು.

Ad Widget . Ad Widget .

ದೇವಸ್ಥಾನ ಅರ್ಚಕ ಶಿವರಾಮ ಉಪಾಧ್ಯಯ ಅವರು ದೇವರ ಸ್ತುತಿ ಮೂಲಕ ಉದ್ಘಾಟನೆ ಮಾಡಿದರು. ಬೆಳ್ಳಾರೆ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಪ್ರಸ್ತಾವಿಕ ವಾಗಿ ಮಾತನಾಡಿದರು. ತರಬೇತಿ ಪಡೆಯುವ 23 ಮಕ್ಕಳು ಭಾಗವಹಿಸಿದರು.

Ad Widget . Ad Widget .

ಈ ಸಂಧರ್ಭದಲ್ಲಿ ಕುಣಿತ ಭಜನೆ ತರಬೇತುದಾರ ಹರ್ಷಿತ್, ಶಾಲಾ ಮುಖ್ಯಗುರು ನಿರ್ಮಲ, ಶ್ರೀ ಹರಿ ಭಜನಾಮಂಡಳಿ ನಿಕಟಪೂರ್ವ ಅಧ್ಯಕ್ಷ ಸುಂದರ ನಾಯ್ಕ, ಪುಣಚತ್ತಾರು ಕಲ್ಪಡ ಉಲ್ಲಾಕುಲು ದೈವಸ್ಥಾನ ಅಧ್ಯಕ್ಷ ಕೇಶವ ಕೆ., ಪೂರ್ಣಿಮಾ ಉಪಾಧ್ಯಯ, ದಾಮೋದರ ಪೊಟ್ರೆ, ರಾಜೇಶ್ ಕನಿಲೆಗುಂಡ್ಡಿ ಬಾಬು ಪೂಜಾರಿ ಕಲ್ಪಡ, ಕೊಡಿಯಾಲ ಸೇವಾಪ್ರತಿನಿಧಿ ರಾಧಾಕೃಷ್ಣ, ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು ಶಾಲಾಭಿವೃದ್ಧಿ ಸಮಿತಿಯವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *