Ad Widget .

ನವರಾತ್ರಿ ನವದುರ್ಗೆ| ಇಂದು ಚಂದ್ರಘಂಟಾ ದೇವಿಯ ಆರಾಧನೆ ಮಾಡಿ

ಸಮಗ್ರ ವಿಶೇಷ: ಮಂತ್ರ ತಂತ್ರ ಮುಂತಾದ ವಿಧಿ ವಿಧಾನಗಳಿಂದ ಪೂಜೆಗೈಯುವ ದುರ್ಗಾ ಮಾತೆಯ ಮೂರನೆಯ ಶಕ್ತಿಯ ಹೆಸರೇ ಚಂದ್ರಘಂಟಾ. ನವರಾತ್ರಿಯ 3ನೆಯ ದಿನದಂದು ಈಕೆಯ ಪೂಜೆಯನ್ನು ಮಾಡಲಾಗುತ್ತದೆ. ನೋಡಲು ಶಾಂತಿ ಸ್ವರೂಪಿಯಂತೆ ಕಾಣುತ್ತಾಳೆ.

Ad Widget . Ad Widget .

ಮಸ್ತಕದಲ್ಲಿ ಘಂಟೆಯನ್ನು ಹೋಲುವ ಅರ್ಧ ಚಂದ್ರನಿದ್ದಾನೆ. ಈ ಕಾರಣದಿಂದಲೇ ಈಕೆಗೆ ಚಂದ್ರ ಘಂಟ ಎಂಬ ಹೆಸರು ಬಂದಿದೆ. ಪ್ರತಿಯೊಂದು ಕೈಗಳಲ್ಲಿಯೂ ಆಯುಧಗಳನ್ನು ಹಿಡಿದುತನ್ನ ವಾಹನವಾದ ಸಿಂಹದ ಮೇಲೆ ಈಕೆ ಕುಳಿತಿದ್ದಾಳೆ. ಇವಳ ಆಕೃತಿ ರಾಕ್ಷಸರನ್ನು ಸಂಹರಿಸಲು ಹೊರಟಂತಿದೆ.

Ad Widget . Ad Widget .

ನವರಾತ್ರಿಯ ಮೂರನೆಯ ದಿನದ ಪೂಜೆಯು ಅತಿ ವಿಶೇಷವಾಗುತ್ತದೆ. ಇಂದಿನ ಪೂಜೆಯಿಂದ ಹೊಸದಾದ ಅನುಭವ ಉಂಟಾಗುತ್ತದೆ. ವಿಶೇಷವಾದ ಧ್ವನಿಗಳ ಕಾರಣ ಮನಸ್ಸಿಗೆ ಅಗೋಚರವಾದ ಆನಂದ ಲಭಿಸುತ್ತದೆ.

ಈ ದೇವಿಯ ಪೂಜೆ ಮಾಡಿದರೆ ಜನ್ಮಜನ್ಮಾಂತರದ ಪಾಪವು ಮರೆಯಾಗುತ್ತದೆ. ಅಗೋಚರ ಬಂಧದಿಂದಲೂ ಬಿಡುಗಡೆಯಾಗಬಹುದು. ಭಕ್ತಿಯಿಂದ ಬೇಡಿದಲ್ಲಿ ಭಕ್ತರ ಜೀವನದ ಕಷ್ಟ ನಷ್ಟಗಳನ್ನು ದೂರ ಮಾಡುತ್ತಾಳೆ. ಇವಳ ಕೈಯಲ್ಲಿರುವ ಘಂಟೆಯನಾದವು ಭಕ್ತರನ್ನು ಕಾಪಾಡಲು ಅನುವಾಗುತ್ತದೆ. ಕೇವಲ ಈ ಶಬ್ದದಿಂದಲೇ ಭೂತ ಪ್ರೇತಗಳು ದೂರ ಉಳಿಯುತ್ತವೆ ಎಂದು ಹೇಳಲಾಗಿದೆ.

ಈಕೆಯ ಪೂಜೆಯಿಂದ ಲಭಿಸುವ ಮತ್ತೊಂದು ಬಲವೆಂದರೆ ಆತ್ಮ ಬಲ. ಕೆಟ್ಟ ಜನರ ಅಂತ್ಯಕ್ಕಾಗಿಯೇ ಜನ್ಮ ತಳೆದ ದುರ್ಗೆಯು ಭಕ್ತರ ಕಣ್ಣಿಗೆ ಶಾಂತಿಯಿಂದ ಕಾಣುವಂತೆ ಮಾಡುತ್ತದೆ. ಈಕೆಯನ್ನು ನೋಡಿದ ಭಕ್ತಾದಿಗಳು ಮಾನಸಿಕ ಶಾಂತಿ ಮತ್ತು ಸಂತಸವನ್ನು ಪಡೆಯುತ್ತಾನೆ. ಈಕೆಯ ಸುತ್ತ ಇರುವ ಬೆಳಕಿನ ಹೃದಯವು ಕೇವಲ ಸಾಧಕರಿಗೆ ಕಾಣುತ್ತದೆ. ಸಂಗೀತ, ನಾಟ್ಯ, ವಚನ, ಸಾಹಿತ್ಯ ಮುಂತಾದ ವಿಧಿ ವಿಧಾನಗಳಿಂದ ದೇವಿಯ ಮನಸ್ಸನ್ನು ಗೆಲ್ಲಬಹುದು. ಈಕೆಯ ಉಪಾಸನೆಯಿಂದ ಸಂಸಾರಿಕ ಕಷ್ಟದಿಂದ ದೂರವಾಗಬಹುದು.

ಚಂದ್ರಘಂಟಾ ರೂಪದಲ್ಲಿ, ದುರ್ಗಾ ದೇವಿಯು ತನ್ನ ಮೂರನೇ ಕಣ್ಣು ತೆರೆದಿರುವಂತೆ ಕಾಣುತ್ತಾಳೆ. ಅವಳನ್ನು ಯುದ್ಧದ ದೇವತೆ ಎಂದು ಕರೆಯಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಜನರು ಶೌರ್ಯ ಮತ್ತು ಧೈರ್ಯದ ಆಶೀರ್ವಾದವನ್ನು ಪಡೆಯಲು ದುರ್ಗಾ ದೇವಿಯ ಚಂದ್ರಘಂಟಾ ರೂಪವನ್ನು ಪ್ರಾರ್ಥಿಸುತ್ತಾರೆ.

ಪೌರಾಣಿಕ ಹಿನ್ನಲೆ: ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.

ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ. ಹೀಗೆ ಶಿವ ಹಾಗೂ ಪಾರ್ವತಿಯು ವಿವಾಹವಾದ ದಿನವನ್ನು ಪ್ರತಿವರ್ಷ ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತದೆ.

ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ರಾಕ್ಷಸರಾದ ಶುಂಭ ಹಾಗೂ ನಿಶುಂಭನನ್ನು ಸೋಲಿಸುವ ಸಲುವಾಗಿ, ಪಾರ್ವತಿ ದೇವಿಯು ಕೌಶಿಕಿಯಾಗಿ ಅವತಾರವೆತ್ತುತ್ತಾಳೆ. ಕೌಶಿಕಿಯ ರೂಪವೇ ರಕ್ಕಸರ ವಿನಾಶವನ್ನು ಸೂಚಿಸುವಂತಿತ್ತು. ಶುಂಭನು ತನ್ನ ಸಹೋದರನಾದ ನಿಶುಂಭನಿಗೆ ಮದುವೆ ಮಾಡಲು ಯೋಜನೆ ಹಾಕಿದ ಶುಂಭ ಅವಳನ್ನು ಕರೆತರಲು ಧೂಮ್ರಲೋಚನನೆಂಬ ರಾಕ್ಷಸನನ್ನು ಕಳುಹಿಸುತ್ತಾನೆ. ಕೌಶಿಕಿಯು ಒಪ್ಪದಿದ್ದಾಗ ಧೂಮ್ರಲೋಚನನು ಹಲ್ಲೆಯನ್ನು ಮುಂದಾದಾಗ ಕೋಪಗೊಂಡ ಕೌಶಿಕಿ ಮಾತೆಯು ಕೇವಲ ‘ಹೂಂಕಾರ’ದಿಂದಲೇ ಧೂಮ್ರಲೋಚನನ್ನು ನಿರ್ಣಾಮ ಮಾಡುತ್ತಾಳೆ.

Leave a Comment

Your email address will not be published. Required fields are marked *