Ad Widget .

ಫ್ರೀ ಟಿಕೆಟ್​​​ ಹರಿದು ಎಸೆದ ಬಿಎಂಟಿಸಿ ಬಸ್​ ಕಂಡಕ್ಟರ್​ ಅಮಾನತು

ಸಮಗ್ರ ನ್ಯೂಸ್: ಮಹಿಳೆಯರಿಗೆ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಶಕ್ತಿ ಯೋಜನೆ ಜಾರಿ ಬಂದ ನಂತರ ಇಲಾಖೆಯ ಆದಾಯ ಹೆಚ್ಚಾಗುತ್ತಿದೆ. ಆದರೆ, ಉಚಿತ ಟಿಕೆಟ್​ಗಳನ್ನು ಬಿಎಂಟಿಸಿ ಬಸ್ ಕಂಡೆಕ್ಟರ್ ಹರಿದು ಬಿಸಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಕಂಡೆಕ್ಟರ್​ನನ್ನು ಅಮಾನತು ಮಾಡಿದ್ದಾರೆ.

Ad Widget . Ad Widget .

ಮೆಜೆಸ್ಟಿಕ್​​​​ನಿಂದ ತಾವರಕೆರೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಅರ್ಜುನ್ ಕೊಟ್ಯಾಳ ಅಮಾನತುಗೊಂಡ ಕಂಡಕ್ಟರ್​. ಡಿಪೋ-17 ಮಾರ್ಗದ ಸಂಖ್ಯೆ-242B ಬಿಎಂಟಿಸಿ ಬಸ್​ನಲ್ಲಿ ಕಂಡೆಕ್ಟರ್ ಆಗಿದ್ದ ಅರ್ಜುನ್​ ನಿನ್ನೆ ಬಸ್​ನಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಉಚಿತ ಟಿಕೆಟ್ ಹರಿದು ಎಸೆಯುತ್ತಿದ್ದರು.

Ad Widget . Ad Widget .

ಈ ಸಂಬಂಧ ಅಧಿಕಾರಿಗಳು ಅರ್ಜುನ್ ಅವರನ್ನು ಬಿಎಂಟಿಸಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಅರ್ಜುನ್ ಅವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ. ಅಲ್ಲದೆ, ಈ ರೀತಿ ಕೆಲಸ ಮತ್ತೊಮ್ಮೆ ಆಗದಂತೆ ಇತರೆ ಕಂಡಕ್ಟರ್​ಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಕಂಡಕ್ಟರ್​​ಗಳು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್​ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪದ ನಡುವೆ ಇನ್ನು ಹೆಚ್ಚಿನ ಇನ್ಷೆಂಟಿವ್​ ಆಸೆಗೆ ಬೇಕಾ ಬಿಟ್ಟಿಯಾಗಿ ಫ್ರೀ ಟಿಕೆಟ್​ಗಳನ್ನು ಹರಿದು ಎಸೆಯುತ್ತಿದ್ದಾಗ ಬಿಎಂಟಿಸಿ ಬಸ್ ಕಂಡಕ್ಟರ್ ಸಿಕ್ಕಿಬಿದ್ದಿದ್ದರು. ಯಾಕೆ ಟಿಕೆಟ್ ಹರಿದು ಬಿಸಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ಮಹಿಳಾ ಪ್ರಯಾಣಿಕರೊಬ್ಬರು, ನಿಮ್ಮಂತವರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರೆಂದು ತರಾಟೆಗೆ ತೆಗೆದುಕೊಂಡಿದ್ದರು.

Leave a Comment

Your email address will not be published. Required fields are marked *