Ad Widget .

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿ| ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಅರಬ್ಬೀ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಮಾದರಿಯ ವಾತಾವರಣ ಉಂಟಾಗಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.

Ad Widget . Ad Widget .

ಲಕ್ಷದ್ವೀಪ, ನೈರುತ್ಯ ಅರಬ್ಬೀ ಸಮುದ್ರ ಮತ್ತು ಕೇರಳ ಕರಾವಳಿಯ ಮಧ್ಯೆ ಸಮುದ್ರ ಮಟ್ಟದಿಂದ ಮೂರು ಕಿಮೀ ಎತ್ತರದಲ್ಲಿ ಚಂಡಮಾರುತ ಮಾದರಿ ವರ್ತುಲ ಉಂಟಾಗಿದ್ದು, ಇದರಿಂದಾಗಿ ಅರಬ್ಬೀ ಸಮುದ್ರ ಮತ್ತು ಕರ್ನಾಟಕ, ಕೇರಳ ಕರಾವಳಿಯಲ್ಲಿ ಅ.17ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

Ad Widget . Ad Widget .

ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಉತ್ತರ ಭಾಗದತ್ತ ಚಲಿಸಲಿದೆ ಎಂದು ಮಂಗಳೂರಿನ ಬಂದರು ಪ್ರಾಧಿಕಾರ(ಎನ್ಎಂಪಿಎ) ಕೇಂದ್ರ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಹೀಗಾಗಿ ಎನ್ಎಂಪಿಎ ಬಂದರಿಗೆ ಆಗಮಿಸುವ ಹಡಗು, ಇನ್ನಿತರ ಎಲ್ಲ ರೀತಿಯ ಕಾರ್ಗೋ ಹಡಗುಗಳು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ.

ಅಲ್ಲದೆ, ಕರಾವಳಿಯಲ್ಲಿ ಮೀನುಗಾರಿಕೆ ನಡೆಸದಂತೆ ಮುಂಜಾಗ್ರತೆ ವಹಿಸಬೇಕು. ಎನ್ಎಂಪಿಎಂ ಬಂದರಿನಲ್ಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಹವಾಮಾನ ಇಲಾಖೆಯ ಸೂಚನೆಯಲ್ಲಿ ವಾಯು ಮಾರುತಗಳು ಬಂಗಾಳ ಕೊಲ್ಲಿಯಿಂದ ಅರಬ್ಬೀ ಸಮುದ್ರದತ್ತ ಚಲಿಸುತ್ತಿದ್ದು, ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕದ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ತಿಳಿಸಲಾಗಿದೆ.

Leave a Comment

Your email address will not be published. Required fields are marked *