ಶಾಸಕ‌ ಸ್ವರೂಪ್ ಪ್ರಕಾಶ್ ಗೆ ಕರೆಂಟ್ ಶಾಕ್| ನಗರ ಸಭೆ ಸಾಮಾನ್ಯ ಸಭೆಯಲ್ಲಿ ಘಟನೆ

ಸಮಗ್ರ ನ್ಯೂಸ್: ಹಾಸನ ನಗರಸಭೆಯಲ್ಲಿ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದ ಶಾಸಕ ಸ್ವರೂಪ್‌ ಪ್ರಕಾಶ್‌ ಅವರಿಗೆ ಸಿಟ್ಟಿಂಗ್‌ ಮೈಕ್‌ ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆದಿದ್ದು, ಅದರಿಂದ ಕೈ ತೆಗೆದ ತಕ್ಷಣವೇ ಕರೆಂಟ್‌ ಹೋಗಿದೆ.

Ad Widget ... ..

ಸಾಮಾನ್ಯ ಸಭೆಯಲ್ಲಿ ವೇದಿಕೆ ಮೇಲೆ ನಿಂತು ಮಾತನಾಡೋ ವೇಳೆ ಕರೆಂಟ್ ಶಾಕ್ ಹೊಡೆಸಿಕೊಂಡಿದ್ದಾರೆ. ನಗರಸಭೆ ಕುವೆಂಪು ಸಭಾಂಗಣದಲ್ಲಿ ನಡೆಯುತ್ತಿದ್ದ ನಗರಸಭಾಧ್ಯಕ್ಷ ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಭಾಗಿಯಾಗಿದ್ದರು.

Ad Widget

ಈ ವೇಳೆ ಮಾತನಾಡುತ್ತಾ ವೇದಿಕೆ ಮೇಲಿದ್ದ ಟೇಬಲ್ ಮೈಕ್ ಮುಟ್ಟಿದ ಶಾಸಕ ಸ್ವರೂಪ್‌ ಪ್ರಕಾಶ್ ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಶಾಸಕ ಸರೂಪ್‌ಗೆ ವಿದ್ಯುತ್ ಶಾಕ್ ಹೊಡೆಯುತ್ತಲೇ ವಿದ್ಯುತ್ ಕಡಿತಗೊಂಡಿದೆ.

Leave a Comment

Your email address will not be published. Required fields are marked *