Ad Widget .

ಜಾಗತಿಕ ಸಮಯ ಪಾಲನೆ/ ಕೆಂಪೇಗೌಡ ವಿಮಾನ ಮೇಲ್ದಾಣಕ್ಕೆ ಅಗ್ರಸ್ಥಾನ

ಸಮಗ್ರ ನ್ಯೂಸ್: ಜಾಗತಿಕ ಮಟ್ಟದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕ ಸಮಯ ಪಾಲನೆಯ ವಿಷಯದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

Ad Widget . Ad Widget .

ಕಳೆದ ಮೂರು ತಿಂಗಳಲ್ಲಿ ಸಾಲೇಕ್ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನಿಯಾಪೊಲೀಸ್ ಸೆಂಟ್ ಪಾಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲ್‌ಡೊರಾಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕವಾಗಿ ಉನ್ನತ ಸ್ಥಾನದಲ್ಲಿವೆ.

Ad Widget . Ad Widget .

ವಿಮಾನಗಳ ಆನ್ ಟೈಮ್ ನಿರ್ಗಮನ ಜುಲೈನಲ್ಲಿ ಶೇ. 87.51, ಆಗಸ್ಟ್‌ನಲ್ಲಿ ಶೇ. 89.9, ಸೆಪ್ಟೆಂಬರ್‌ನಲ್ಲಿ 88.51ರಷ್ಟಿದ್ದು, ಮೂರೂ ತಿಂಗಳಲ್ಲಿ ಜಾಗತಿಕವಾಗಿ ಸಮಯಪಾಲನೆ ಮಾಡಿದ ವಿಮಾನ ನಿಲ್ದಾಣ ಎಂಬ ಗೌರವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ
ದೊರೆತಿದೆ.

ಕಳೆದು ಮೂರು ತಿಂಗಳಲ್ಲಿ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಿದ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಒಂದಾಗಿದ್ದು, ದೇಶದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೂ ಆಗಿದೆ. 2022-23 ರ ಅವಧಿಯಲ್ಲಿ ಒಟ್ಟಾರೆ 31.91 ಮಿಲಿಯನ್ ಪ್ರಯಾಣಿಕರನ್ನು ಇಲ್ಲಿ ನಿಭಾಯಿಸಲಾಗಿದೆ.

Leave a Comment

Your email address will not be published. Required fields are marked *