Ad Widget .

ಮಡಿಕೇರಿ ದಸರಾ : ಮುಖವಾಡ ಮತ್ತು ಕರ್ಕಶ ಶಬ್ದ ಮಾಡುವ ತುತ್ತೂರಿ (ಪೀಪಿ) ಗಳಿಗೆ ಕಡಿವಾಣ

ಸಮಗ್ರ ನ್ಯೂಸ್: ಮುಖವಾಡ ಮತ್ತು ಕರ್ಕಷ ಧ್ವನಿ ಹೊರಡಿಸುವ ಎಲ್ಲಾ ಮಾದರಿಯ ತುತ್ತೂರಿ (ಪಿಪಿ) ಗಳನ್ನು ಈ ಬಾರಿ ಮಡಿಕೇರಿ ದಸರಾದಲ್ಲಿ ನಿಷೇಧಿಸಲಾಗಿದೆ. ಅದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮುಖವಾಡ ಮತ್ತು ಕರ್ಕಶ ಧ್ವನಿಯ ತುತ್ತೂರಿ( ಪಿಪಿ) ಗಳನ್ನು ಬಳಸುವವರ ವಿರುದ್ಧ ದಂಡ ವಿಧಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.

Ad Widget . Ad Widget .

ಇದಲ್ಲದೇ ಇವುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ತೆರವು ಮಾಡುವಂತೆಯೂ ಪೊಲೀಸರಿಗೆ ತಿಳಿಸಲಾಗಿದೆ ಎಂದು ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.

Ad Widget . Ad Widget .

ಕಳೆದ ವರ್ಷವೂ ಈ ಪೀಪಿ, ಮುಖವಾಡಗಳ ನಿಷೇಧಕ್ಕೆ ಕ.ರಾ.ವೇ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Comment

Your email address will not be published. Required fields are marked *