Ad Widget .

ಚಿಕ್ಕಮಗಳೂರು : ಪತ್ನಿಯ ಶೀಲ ಶಂಕಿಸಿ ಪತಿಯಿಂದ ಪತ್ನಿ ಕೊಲೆ

ಸಮಗ್ರನ್ಯೂಸ್: ಕುಡಿದ ಮತ್ತಿನಲ್ಲಿ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತಿಯೇ ಪತ್ನಿಯನ್ನ ಕೊಲೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಅ.14 ರಂದು ನಡೆದಿದೆ.

Ad Widget . Ad Widget .

ಮೃತಳನ್ನ 40 ವರ್ಷದ ಪದ್ಮಾಕ್ಷಿ ಎಂದು ಗುರುತಿಸಲಾಗಿದ್ದು, ಕಿರಗುಂದ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಹಾಗೂ ಪದ್ಮಾಕ್ಷಿ ದಂಪತಿ ಮಧ್ಯೆ ಕುಡಿತ ಹಾಗೂ ಪದ್ಮಾಕ್ಷಿಯ ಅನೈತಿಕ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು. ಕಳೆದ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಪತಿ ಚಂದ್ರ ಪತ್ನಿ ಜೊತೆ ಜಗಳವಾಡಿದ್ದಾನೆ.

Ad Widget . Ad Widget .

ಕುಡಿದ ಮತ್ತಿನಲ್ಲಿ ಪತ್ನಿಯ ಅನೈತಿಕ ಸಂಬಂಧವನ್ನ ಶಂಕಿಸಿ ಜಗಳವಾಡಿ ಪತ್ನಿಗೆ ಹೊಡೆದು, ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯನ್ನ ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡು ಮಲಗಿದ್ದಾನೆ. ಕೊಡಲಿಯಿಂದ ಹಲ್ಲೆಗೈದ ಹಿನ್ನೆಲೆ ತೀವ್ರ ರಕ್ತಸ್ರಾವ ಹಾಗೂ ಇಡೀ ರಾತ್ರಿ ಹೊರಗೆ ಬಿದ್ದಿದ್ದ ಮಹಿಳೆ ಪದ್ಮಾಕ್ಷಿ ಅತಿಯಾದ ಶೀತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಪತ್ನಿಗೆ ಹೊಡೆದು ಹೊರತಳ್ಳಿ ಮಲಗಿದ್ದ ಪತಿ ಚಂದ್ರ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಸಾವನ್ನಪ್ಪಿದ್ದಳು. ಪತ್ನಿಯ ಶವದ ಮುಂದೆ ಕೂತು ಕಣ್ಣೀರಿಟ್ಟಿದ್ದಾನೆ. ಮೃತಳಿಗೆ 18 ಹಾಗೂ 15 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಇವರ ಜಗಳದ ವೇಳೆ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದಿದೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಚಂದ್ರನನ್ನ ಬಂಧಿಸಿ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಸಿದ್ದಾರೆ.

Leave a Comment

Your email address will not be published. Required fields are marked *