Ad Widget .

ಬಿಗ್ ಬಾಸ್​ ಮನೆಯಲ್ಲಿ ಮೊದಲ ಎಲಿಮಿನೇಷನ್… ಸ್ನೇಕ್​ ಶ್ಯಾಮ್ ಔಟ್

ಸಮಗ್ರ ನ್ಯೂಸ್: ಕಿರುತೆರೆಯ ಬಿಗೆಸ್ಟ್ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್​ ಸೀಸನ್​ 10ರಲ್ಲಿ ಈ ವಾರ ಎಮಿನೇಷನ್ ಪ್ರಕ್ರಿಯೆಯಲ್ಲಿ ಸ್ನೇಕ್​ ಶ್ಯಾಮ್​ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಸಂಡೇ ವಿತ್​ ಸುದೀಪ್​ ಕಾರ್ಯಕ್ರಮದಲ್ಲಿ ಸುದೀಪ್ ಮನೆಯವರನ್ನೆಲ್ಲಾ ತರಾಟೆಗೆ ತೆಗೆದುಕೊಂಡಿದ್ರು.​ ಬಿಗ್ ಬಾಸ್ ಮನೆಯಲ್ಲಿ ಮೊದಲ ಎಲಿಮಿನೇಷನ್ ಪ್ರಕ್ರಿಯೆ ನಡೆಯಿತು. ಈ ವೇಳೆ ಉರಗ ತಜ್ಞ ಸ್ನೇಕ್​ ಶ್ಯಾಮ್​ ಬಿಗ್ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ.

Ad Widget . Ad Widget .

ಒಂದೇ ವಾರಕ್ಕೆ ಸ್ನೇಕ್ ಶ್ಯಾಮ್​ ಔಟ್ ಆಗಿದು ಬಿಗ್ ಬಾಸ್ ಮನೆಗೆ 8ನೇ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟ ಸ್ನೇಕ್ ಶ್ಯಾಮ್ ಬಿಗ್​ ಬಾಸ್​ ಮನೆಯಲ್ಲಿದ್ದ ಒಂದು ವಾರಗಳ ಕಾಲ ಎಲ್ಲರ ಜೊತೆ ಬೆರೆತು ಆಟವಾಡಿದ್ರು. ಆದ್ರೆ ಎಲಿಮಿನೇಷನ್ ಪ್ರಕ್ರಿಯೆ ಶುರುವಾದ ವೇಳೆ ಮನೆಯ ಸದಸ್ಯರಲ್ಲಿ ಬಹುತೇಕರು ಸ್ನೇಕ್ ಶ್ಯಾಮ್​ ಹೆಸರನ್ನೇ ಎಲಿಮಿನೇಷನ್​ನಲ್ಲಿ ಮೊದಲು ತೆಗೆದುಕೊಂಡಿದ್ರು.

Ad Widget . Ad Widget .

ಇನ್ನೂ ಸ್ನೇಕ್ ಶ್ಯಾಮ್​ ಅವರಿಗೆ ಸ್ವಲ್ಪ ವಯಸ್ಸಾಗಿರುವ ಕಾರಣ ಕೆಲ ಅನಾರೋಗ್ಯ ಸಮಸ್ಯೆ ಕೂಡ ಇತ್ತು. ಈ ಬಗ್ಗೆ ಅವರೇ ಮನೆ ಮಂದಿ ಜೊತೆ ಹೇಳಿಕೊಂಡ್ರು. ಸ್ನೇಕ್​ ಶ್ಯಾಮ್​ ಅವರಿಗೆ ಬಿಗ್ ಬಾಸ್​ ನೀಡುವ ಟಾಸ್ಕ್ ಮಾಡೋದು ಕೂಡ ಕೊಂಚ ಕಷ್ಟವೇ ಆಗಿತ್ತು. ಹೀಗಾಗಿ ಮನೆ ಮಂದಿಯೆಲ್ಲಾ ಸ್ನೇಕ್​ ಶ್ಯಾಮ್ ಹೆಲ್ತ್ ವಿಷಯವನ್ನೇ ಇಟ್ಟುಕೊಂಡು ಎಲಿಮಿನೇಷನ್​​ ಪ್ರಕ್ರಿಯೆಯಲ್ಲಿ ಅವರ ಹೆಸರು ಹೇಳಿದ್ರು. ಎಲಿಮಿನೇಟ್​ ಆದವರ ಪೈಕಿ ಸ್ನೇಕ್​ ಶ್ಯಾಮ್ ಅವರಿಗೆ ಕಡಿಮೆ ವೋಟ್​ ಬಂದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.

Leave a Comment

Your email address will not be published. Required fields are marked *