ಸಮಗ್ರ ನ್ಯೂಸ್: ಭಾರತದ ಅಪರೂಪದ ವನ್ಯ ಜೀವಿಗಳಲ್ಲಿ ಒಂದಾದ ಉಡಾವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದನ್ನು ಹಿಡಿದು ಫೋಟೊಗಳಿಗೆ ಫೋಸ್ ನೀಡಿ ವಿಜ್ರಂಭಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ವಗ್ಗದಲ್ಲಿ ಬೆಳಕಿಗೆ ಬಂದಿದೆ.
ಉಡಾವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗದ ಸುಧಾಕರ ಎಂದು ಗುರುತ್ತಿಸಲಾಗಿದ್ದು ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ1972 ಅನ್ವಯ ಕೇಸ್ ದಾಖಲು ಮಾಡಿದ್ದಾರೆ.
ಅಕ್ಟೋಬರ್ 11 ರಂದು ಘಟನೆ ಬೆಳಕಿಗೆ ಬಂದಿದ್ದು ಬೃಹತ್ ಗಾತ್ರದ ಉಡವನ್ನು ಹಿಂಸಾತ್ಮಕ ರೀತಿಯನ್ನು ಸಾಯಿಸಿ ಬಳಿಕ ಅದನ್ನು ತೆಗೆದುಕೊಂಡು ವಿಜ್ರಂಭಿಸುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದು ಜೊತೆಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿದ್ದ.
ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪ್ರಕರಣದ ತನಿಖೆ ನಡಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಂಥೋಣಿ ಎಸ್. ಮರಿಯಪ್ಪ ಮಾಹಿತಿ ನೀಡಿದ್ದಾರೆ.
ಉಡಾ ಸಾಯಿಸಿದ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿ ಸುಧಾಕರ್ ತಲೆ ಮರೆಸಿಕೊಂಡಿದ್ದಾನೆ. ಆತ ಉಡಾ ಸಾಯಿಸಿ ಶೇರ್ ಮಾಡಿದ ಸಾಮಾಜಿಕ ಜಾಲಾತಾಣ ವಾಟ್ಸ್‌ಅಪ್ ಎಡ್ಮಿನ್ ನನ್ನು ವಿಚಾರಣೆ ಕರೆಸಿ ತನಿಖೆ ನಡಸಿದ್ದು ಆತನ ಸಿಡಿಆರ್ ಪರಿಶೀಲನೆ ನಢೆಸುತ್ತಿದ್ದು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.