Ad Widget .

ನವರಾತ್ರಿ ನವದುರ್ಗೆ| ಯಾರಿವಳು ಶೈಲಪುತ್ರಿ? ಆರಾಧನೆ ಹೇಗೆ?

ಸಮಗ್ರ ವಿಶೇಷ: ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈದಿದ್ದಳು. ತನ್ನ ಪತಿ ಶಿವನನ್ನು ತಂದೆ ಅವಮಾನಿಸಿದ ಕಾರಣಕ್ಕಾಗಿ ಸತಿ ಹೀಗೆ ಮಾಡಿದಳು. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆದುಕೊಂಡಳು. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿಹೋದ. ದೇವಿ ಶೈಲಪುತ್ರಿಯು ಕಾಡಿಗೆ ಹೋಗಿ ತುಂಬಾ ಕಠಿಣ ತಪಸ್ಸಿನಲ್ಲಿ 16 ವರ್ಷ ಕಳೆದಳು. ಇದರ ಬಳಿಕವಷ್ಟೇ ಆಕೆ ತನ್ನ ಪತಿ ಶಿವನನ್ನು ಮರಳಿ ಪಡೆದಳು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದೇವಿ ಶೈಲಪುತ್ರಿಯನ್ನು ಯಾವಾಗಲೂ ಆದಿಶಕ್ತಿಯೆಂದು ಗುರುತಿಸಲಾಗಿದೆ. ಆಕೆ ಗೂಳಿ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ಆಕೆಯನ್ನು ವೃಷರುಧ ಎಂದು ಕರೆಯಲಾಗುತ್ತದೆ. ಆಕೆಗೆ ಎರಡು ಕೈಗಳಿದ್ದು, ಒಂದರಲ್ಲಿ ತ್ರಿಶೂಲ ಮತ್ತೊಂದರಲ್ಲಿ ಕಮಲದ ಹೂವಿದೆ. ಅರ್ಧಚಂದ್ರಾಕೃತಿಯು ಆಕೆಯ ಹಣೆಯಲ್ಲಿದೆ. ಆಕೆಯನ್ನು ಯಾವಾಗಲೂ ಬಿಳಿ ಬಟ್ಟೆಯಲ್ಲಿ ತೋರಿಸಲಾಗುತ್ತದೆ.

Ad Widget . Ad Widget . Ad Widget .

ಯೋಗದಲ್ಲಿ ಮೂಲಾಧಾರ ಚಕ್ರವು ಮೂಲವಾಗಿರುವುದು. ದೇವಿ ಶೈಲಪುತ್ರಿಯು ಈ ಚಕ್ರದ ದೇವತೆ. ಈ ಚಕ್ರವು ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಈ ಚಕ್ರವು ಜಾಗೃತಗೊಂಡಾಗ ಆ ವ್ಯಕ್ತಿಯು ಆಧ್ಯಾತ್ಮಿಕ ಪ್ರಯಾಣಕ್ಕೆ ಹೋಗುವನು. ನಿಮಗೆ ಜೀವನದಲ್ಲಿ ಶಕ್ತಿ ಹಾಗೂ ಸ್ಥಿರತೆ ಬೇಕೆಂದರೆ ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯ ಪೂಜಿಸಿ.

ಎಲ್ಲಾ ದೇವದೇವತೆಗಳ ಅಹಂ ಹಾಗೂ ಪ್ರತಿಷ್ಠೆಯನ್ನು ಶೈಲಪುತ್ರಿ ದೇವಿಯು ಯಾವ ರೀತಿ ಧ್ವಂಸ ಮಾಡಿದಳು ಎನ್ನುವ ಬಗ್ಗೆ ಉಪನಿಷತ್ ನಲ್ಲಿ ಉಲ್ಲೇಖವಿದೆ. ಎಲ್ಲಾ ದೇವದೇವತೆಗಳು ವಿನಮ್ರ ಹೃದಯದಿಂದ ಆಕೆಯನ್ನು ನಮಿಸಿದರು ಎಂದು ಹೇಳಲಾಗುತ್ತದೆ. ದೇವಿ ಶೈಲಪುತ್ರಿಯು ಅಂತಿಮ ಶಕ್ತಿ ಮತ್ತು ಪ್ರತಿಯೊಂದರ ಹಿಂದೆಯೂ ಆಕೆ ಇದ್ದಾಳೆ ಎಂದು ಅವರೆಲ್ಲರೂ ಹೇಳಿದರು. ತ್ರಿಮೂತ್ರಿಗಳಾದ ಬ್ರಹ್ಮ ವಿಷ್ಣು ಮತ್ತು ಶಿವ ಕೂಡ ತಮ್ಮ ಶಕ್ತಿಗಾಗಿ ಶೈಲಪುತ್ರಿಯನ್ನು ಅವಲಂಬಿಸಿದ್ದಾರೆ.

ದೇವಿಯು ಮಲ್ಲಿಗೆ ಹೂವನ್ನು ತುಂಬಾ ಇಷ್ಟಪಡುತ್ತಾಳೆ. ಶೈಲಪುತ್ರಿಯ ಪೂಜಿಸುತ್ತಾ ಇದ್ದರೆ ನೀವು ಮೊದಲ ದಿನದಂದು ಮಲ್ಲಿಗೆ ಹೂ ಅರ್ಪಿಸಿ ನಿಮ್ಮ ಆಕಾಂಕ್ಷೆ ಈಡೇರಿಸಿಕೊಳ್ಳಿ. ನವರಾತ್ರಿಯ ಮೊದಲ ದಿನವು ಹಳದಿ ಬಣ್ಣಕ್ಕೆ ಸೀಮಿತವಾಗಿದೆ. ಈ ದಿನ ಸರಳವಾಗಿರುವ ಹಳದಿ ಬಣ್ಣದ ಬಟ್ಟೆ ಧರಿಸಬೇಕು.

ಓಂಕಾರಹಃ ಮೇ ಶಿರಾಹ್ ಪಟು ಮೂಲಾಧರ ನಿವಾಸಿನಿ |
ಹಿಮಾಕರಹಃ ಪಟು ಲಾಲೇಟ್ ಬಿಜರೂಪ ಮಹೇಶ್ವರಿ ||
ಶ್ರಿಂಕಾರ ಪಟು ವಾದನೇ ಲಾವಣ್ಯ ಮಹೇಶ್ವರಿ |
ಹಂಕಾರ ಪಟು ಹೃದಯಯಂ ತಾರಿಣಿ ಶಕ್ತಿ ಸ್ವಾಘ್ರಿತಾ
ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಾಪ್ರದಾ ||
ರಕ್ಷಣೆಗಾಗಿ ಮತ್ತು ಶೈಲಪುತ್ರಿ ದೇವಿಯ ಆಶೀರ್ವಾದಕ್ಕಾಗಿ ಮೇಲಿನ ಶ್ಲೋಕವನ್ನು ಪಠಿಸಿ.

Leave a Comment

Your email address will not be published. Required fields are marked *