ಸಮಗ್ರ ನ್ಯೂಸ್:ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಅ.15ರಂದು ದಸರಾ ಪ್ರಯುಕ್ತ ಗೊಂಬೆ ಉತ್ಸವವನ್ನು ಏರ್ಪಡಿಸಲಾಗಿತ್ತು.
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಳ್ಯದಲ್ಲಿ ಪ್ರಪ್ರಥಮವಾಗಿ ಆಚರಿಸುತ್ತಿರುವ ಗೊಂಬೆ ಹಬ್ಬ ಹಾಗೂ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ಡಾ.ಸಾಯಿಗೀತಾ ಜ್ಞಾನೇಶ್ ಅವರು ದೇವಿಯ ಭಜನೆ ಹಾಡಿ ವಿಜಯದಶಮಿಯ ಬಗ್ಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ ಅವರು ಗೊಂಬೆ ಹಬ್ಬದ ವಿಶೇಷ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶುಭಕರ ಬಿ.ಸಿ. ಇವರು ನಿರಾಕಾರ ರೂಪದ ಗೊಂಬೆಗಳಿಗೆ ಅಲಂಕಾರ ಮಾಡಿದಾಗ ಹೇಗೆ ಸಕಾರ ರೂಪವನ್ನು ಪಡೆಯುತ್ತವೆ ಎಂದು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಪೋಷಕರಿಗೆ ರಂಗೋಲಿ ಹಾಗೂ ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪೋಷಕ ಪ್ರತಿನಿಧಿ ಶುಶಾನ್ ಸ್ವಾಗತಿಸಿ, ಸಂಸ್ಥೆಯ ಪೋಷಕರಾದ ಪ್ರಮೀಳಾ ಇವರು ಪ್ರಾರ್ಥಿಸಿ ರಕ್ಷಿತಾ ವಂದಿಸಿ, ಸಂಸ್ಥೆಯ ಶಿಕ್ಷಕಿ ನಿರ್ಮಲ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.