Ad Widget .

Health Tips|ಮಕ್ಕಳಲ್ಲಿ ತೊದಲನ್ನು ನಿವಾರಿಸುವ ‘ಬಜೆ’| ಬಳಕೆ, ಪ್ರಯೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಗ್ರ ನ್ಯೂಸ್:ಬಜೆ ಬಹುಮಟ್ಟಿಗೆ ಎಲ್ಲ ತಾಯಂದಿರಿಗೂ ಪರಿಚಯವಿರುವ ಮೂಲಿಕೆ, ವಚಾ, ಉಗ್ರಗಂಧಾ ಮುಂತಾದ ಹೆಸರುಗಳಿಂದ ಬಜೆಯನ್ನು ಗುರುತಿಸಲಾಗುತ್ತದೆ. ಜೌಗು, ನೀರಿರುವ ಕಡೆ ಚೆನ್ನಾಗಿ ಬೆಳೆಯುವ ಸಸ್ಯ ಅರಿಶಿನ, ಶುಂಠಿಗಳಂತೆ ಬೇರಿನ ತುಂಡಿನಿಂದ ಬೆಳೆಸಬಹುದು. ನಾಲ್ಕರಿಂದ ಆರು ತಿಂಗಳಲ್ಲಿ ಬಳಕೆಗೆ ಸಿದ್ಧವಾಗುವ ಈ ಮೂಲಿಕೆ ತೀವ್ರ ವಾಸನೆಯಿಂದ ಕೂಡಿರುತ್ತದೆ. ಸ್ವಲ್ಪ ಮರಳು ಮಿಶ್ರಿತ ಮಣ್ಣಿನಲ್ಲಿ ಬಜೆ ಚೆನ್ನಾಗಿ ಬೆಳೆಯುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬಜೆಯಲ್ಲಿ ಬಳಕೆಯಾಗುವ ಭಾಗ ಬೇರು. ರುಚಿಯಲ್ಲಿ ಖಾರ ಮತ್ತು ಕಹಿ, ಉಷ್ಣವನ್ನು ಹೆಚ್ಚಿಸುವ ಸ್ವಭಾವ. ಬಜೆ, ಮಕ್ಕಳಿಗೆ ತಾಯಿಯ ಹಾಗೆ ಮನೆಯಲ್ಲಿ ವೈದ್ಯರಿದ್ದಂತೆ. ಬಜೆ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ತೊದಲನ್ನು ನಿವಾರಿಸುತ್ತದೆ. ತಲೆನೋವು, ಕೀಲು ನೋವು, ಹೊಟ್ಟೆ ನೋವು, ಶೀತ-ನೆಗಡಿಗಳನ್ನು ಶಮನಗೊಳಿಸುತ್ತದೆ.

Ad Widget . Ad Widget . Ad Widget .

ಸಾಣೆಕಲ್ಲಿನ ಮೇಲೆ (ಅರೆಯುವ ಕಲ್ಲು, ಮಣೆ ಇತ್ಯಾದಿ) ಮೂರು-ನಾಲ್ಕು ಹನಿ ಜೇನುತುಪ್ಪ ಹಾಕಬೇಕು. ಬಜೆಯ ತುಂಡೊಂದನ್ನು ಇದರ ಮೇಲೆ ಐದು-ಹತ್ತು ಸುತ್ತು ತೇಯಬೇಕು. ಬರುವ ಗಂಧವನ್ನು ಚಿಕ್ಕ ಮಕ್ಕಳಿಗೆ ತಿನ್ನಿಸಬೇಕು. ಇದರಿಂದ ಮಕ್ಕಳಲ್ಲಿ ಸ್ಮರಣಶಕ್ತಿ, ಬುದ್ಧಿಶಕ್ತಿ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ತೊದಲು ನಿವಾರಣೆಯಾಗಿ ಮಾತು ಸ್ಪಷ್ಟವಾಗುತ್ತದೆ. ಇದನ್ನು ವಯೋನುಸಾರ, ಒಂದರಿಂದ ಎರಡು ತಿಂಗಳ ಮಕ್ಕಳಿನಿಂದ ಹಿಡಿದು ಐದು ವರ್ಷದ ಮಕ್ಕಳವರೆಗೆ ಕೊಡಬಹುದು. ಮಕ್ಕಳನ್ನು ಹೆಚ್ಚೆಂದರೆ ಒಂದು ಉದ್ದಿನಕಾಳಿನ ಪ್ರಮಾಣ, ದೊಡ್ಡವರಲ್ಲಿ ಒಂದು ತೊಗರಿಕಾಳು ಅಥವಾ ಗುಲಗಂಜಿ ಪ್ರಮಾಣ ಕೊಡಬಹುದು.

ಮಕ್ಕಳಲ್ಲಿ ತಲೆನೋವು, ಶೀತ- ನೆಗಡಿಗಳು ಕಂಡು ಬಂದಾಗ, ಜ್ವರದ ತಾಪ ಹೆಚ್ಚಾದಾಗ ಈ ಬೇರನ್ನು ಬಿಸಿ ನೀರು ಅಥವಾ ಹಾಲಿನಲ್ಲಿ ಅರೆದು ಹಣೆಯ ಮೇಲೆ ಹಚ್ಚುವುದರಿಂದ ಸಹಕಾರಿಯಾಗುತ್ತದೆ. ಕೀಲುನೋವು, ಹೊಟ್ಟೆನೋವಿದ್ದಾಗ ನೋವಿರುವ ಭಾಗಕ್ಕೆ ಲೇಪಿಸುವುದರಿಂದ ನೋವು ಶಮನವಾಗುತ್ತದೆ.

(ವಿ.ಸೂ: ಇಲ್ಲಿ ಪ್ರಕಟವಾಗುವ ಸಲಹೆಗಳು ತಜ್ಞರು ನೀಡಿರುವ ಅಭಿಪ್ರಾಯವಾಗಿರುತ್ತದೆ. ಅದಾಗ್ಯೂ ಬಳಸುವ ಮೊದಲು ನಿಮ್ಮ ಆರೋಗ್ಯ ಸಲಹೆಗಾರರನ್ನು ವಿಚಾರಿಸಿ – ಸಂ.)

Leave a Comment

Your email address will not be published. Required fields are marked *