Ad Widget .

ಏಕದಿನ ವಿಶ್ವಕಪ್ ಸರಣಿ/ ಇಂದು ಭಾರತ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಹೈವೋಲ್ವೇಜ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಆಸಕ್ತರಾಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ 31 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ಎದುರು ಭಾರತ ತಂಡವು ಒಂದು ಬಾರಿಯೂ ಸೋತಿಲ್ಲ. ಹಾಗಾಗಿ ಇಂದು ಮತ್ತೊಮ್ಮೆ ತನ್ನ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಉಭಯ ತಂಡಗಳು ಏಳು ಬಾರಿ ಮುಖಾಮುಖಿಯಾಗಿವೆ. ಎಲ್ಲ ಸಲವೂ ಭಾರತವೇ ಜಯಿಸಿದೆ. ಕಳೆದ ತಿಂಗಳು ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಗುಂಪು ಹಂತದಲ್ಲಿ ಒಮ್ಮೆ ಹಾಗೂ ಸೂಪರ್ ಫೋರ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದವು. ಗುಂಪು ಹಂತದ ಪಂದ್ಯ ಮಳೆಗಾಹುತಿಯಾಗಿತ್ತು. ನಾಲ್ಕರ ಘಟ್ಟದಲ್ಲಿ ಭಾರತ ಗೆದ್ದಿತ್ತು.

Ad Widget . Ad Widget . Ad Widget .

ಇಂದಿನ ಪಂದ್ಯವು ಉಭಯ ತಂಡಗಳ ಬೌಲರ್‌ಗಳ ನಡುವಣ ಹಣಾಹಣಿಯೆಂದೇ ಬಿಂಬಿತವಾಗಿದೆ. ಭಾರತದ ಜಸ್ಟೀತ್ ಬುಮ್ರಾ ನೇತೃತ್ವದ ಭಾರತದ ಬೌಲಿಂಗ್ ಪಡೆ ಹಾಗೂ ಶಾಹಿನ್ ಅಫ್ರಿದಿ ನೇತೃತ್ವದ ಬೌಲಿಂಗ್ ಬಲಿಷ್ಠವಾಗಿದೆ.

ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು, ಜ್ವರದಿಂದ ಬಳಲಿ ಎರಡು ಪಂದ್ಯಗಳಿಂದ ದೂರ ಉಳಿದಿದ್ದ ಶುಭಮನ್ ಗಿಲ್ ಇಂದು ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ.

ಪಾಕ್ ತಂಡದಲ್ಲಿ ನಾಯಕ ಬಾಬರ್ ಆಜಂ ಮತ್ತು ಅನುಭವಿ ಫಕಾರ್ ಜಮಾನ್ ಅವರಿಗೆ ಲಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಮಿಂಚುತ್ತಿದ್ದಾರೆ. ತಂಡವು ಎರಡೂ ಪಂದ್ಯಗಳಲ್ಲಿ ಜಯಿಸಲು ತಮ್ಮ ಬ್ಯಾಟಿಂಗ್ ಮೂಲಕ ಉತ್ತಮ ಕಾಣಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *