Ad Widget .

ಲುಲು ಮಾಲ್​​​ನಲ್ಲಿ ಪಾಕ್ ಧ್ವಜ ವಿವಾದ…

ಸಮಗ್ರ ನ್ಯೂಸ್: ಕೊಚ್ಚಿಯ ಲುಲು ಮಾಲ್‌ನಲ್ಲಿ ಮಾಲ್ ಅಧಿಕಾರಿಗಳು ಪಾಕಿಸ್ತಾನದ ದೊಡ್ಡ ಧ್ವಜವನ್ನು ಪ್ರದರ್ಶಿಸಿದ್ದಾರೆ. ಭಾರತ ಸೇರಿದಂತೆ ಇತರ ಎಲ್ಲಾ ಧ್ವಜಗಳು ಚಿಕ್ಕದಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಂಡಿದ್ದಕ್ಕಾಗಿ ಕರ್ನಾಟಕ ಪೊಲೀಸರು ಬಿಜೆಪಿ ಕಾರ್ಯಕರ್ತೆ ಶಕುಂತಲ ನಟರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ ನಾಯಕಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಇದು ಬೆಂಗಳೂರು ಲುಲು ಮಾಲ್‌ನಲ್ಲಿ ನಡೆದಿದೆ ಎಂದಿದ್ದರು. ಆದರೆ ಈ ಫೋಟೋ ಕೇರಳದ ಲುಲು ಮಾಲ್‌ನದ್ದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಧ್ವಜದ ಫೋಟೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ರಾಜೀನಾಮೆ ನೀಡಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. ವಾಸ್ತವವಾಗಿ ಎಲ್ಲ ಧ್ವಜಗಳು ಒಂದೇ ಗಾತ್ರದಲ್ಲಿದ್ದು, ಫೋಟೊ ತೆಗೆದ ಆ್ಯಂಗಲ್​​​ನಲ್ಲಿ ಪಾಕ್ ಧ್ವಜ ಇತರ ಧ್ವಜಗಳಿಗಿಂತ ದೊಡ್ಡದಾಗಿ ಕಾಣುತ್ತದೆ ಎಂದು ಫ್ಯಾಕ್ಟ್ ಚೆಕ್ ಮಾಡಿ ಮಾಧ್ಯಮಗಳು ವರದಿ ಮಾಡಿದ್ದವು.

Ad Widget . Ad Widget . Ad Widget .

Leave a Comment

Your email address will not be published. Required fields are marked *