Ad Widget .

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ| ಮದ್ಯ ಕುಡಿಸಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬಳ್ಳಾರಿಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಕೊಪ್ಪಳಕ್ಕೆ ಕರೆತಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

Ad Widget . Ad Widget .

ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿದ ಕಿರಾತಕರು ಕೊಪ್ಪಳದ ಸಣಾಪುರ ಬಳಿಯ ಹೋಟೆಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ನವೀನ್, ಸಾಕೀವ್, ತನು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

Ad Widget . Ad Widget .

ಯುವತಿ ಬಳ್ಳಾರಿಯ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ನಿಮ್ಮ ಅಣ್ಣ ಬಂದಿದ್ದಾನೆಂದು ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಕ್ಕೆ ಕರೆಯಿಸಿ ನಂತರ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ನಂತರ ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಕೆಫೆ ಹೋಟೆಲ್ ಗೆ ಕರೆದೊಯ್ದು ಬಿಯರ್ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *