Ad Widget .

‘ವೀರೇಂದ್ರ ಹೆಗ್ಗಡೆ ಅಕ್ರಮಗಳನ್ನು ತನಿಖೆ ನಡೆಸಿ’| ಸತ್ಯಮೇವ ಜಯತೇ ಸಂಘಟನೆಯಿಂದ ಸರ್ಕಾರಕ್ಕೆ ಮನವಿ

ಸಮಗ್ರ ನ್ಯೂಸ್: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಎಲ್ಲಾ ಅಕ್ರಮಗಳ ತನಿಖೆ ನಡೆಸಿ ಎಂದು ಸತ್ಯಮೇವ ಜಯತೇ ಸಂಘಟನೆಯಿಂದ ಕೃಷಿ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲಾಗಿದೆ.

Ad Widget . Ad Widget .

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ನಡೆಸಿರುವ 4ಸಾವಿರಕ್ಕೂ ಮಿಕ್ಕಿದ ಆಸ್ತಿ ಕಬಳಿಕೆ, ಮೈಕ್ರೋ ಫೈನಾನ್ಸ್ ,ಮೀಟರ್ ಬಡ್ಡಿ ದಂಧೆ. ಮಹಿಳಾ ದೌರ್ಜನ್ಯ. ದಲಿತರು ಮತ್ತು ಬಡವರ ಜಾಗದ ಕಬಳಿಕೆ, ದಲಿತ ಶೋಷಣೆ, ಹೀಗೆ ಇನ್ನೂ ಹಲವು ಬ್ರಹ್ಮಾಂಡ ಭ್ರಷ್ಟಾಚಾರಗಳ ಆರೋಪ ಹೊರಿಸಿ ತಕ್ಷಣದಿಂದಲೇ ವಿಸ್ತೃತವಾಗಿ ತನಿಖೆ ನಡೆಸಿ ಕೂಡಲೇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಪ್ರವರ್ತಿತ ಹಲವು ಪ್ರಗತಿಪರ ಚಿಂತಕರನ್ನೊಳಗೊಂಡ ಸತ್ಯಮೇವ ಜಯತೇ ಸಂಘಟನೆಯಿಂದ ಮನವಿ‌ ಮಾಡಲಾಗಿದೆ.

Ad Widget . Ad Widget .

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಮಂತ್ರಿ ಎನ್. ಚೆಲುವರಾಯ ಸ್ವಾಮಿ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಹಾಗೂ ಮಾಜೀ ಶಾಸಕ ವಸಂತಬಂಗೇರ ಮುಂತಾದವರಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *