ಸಮಗ್ರ ನ್ಯೂಸ್: ವೀಕೆಂಡ್ ಅಥವಾ ರಜೆ ಸಿಕ್ಕಿದ್ದಾಗ ಜನರು ಪ್ರವಾಸ ಹೋಗೊದಂತು ಇದ್ದದ್ದೆ, ಅದೇ ರೀತಿ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮನಸೋಲದ ಪ್ರವಾಸಿಗರು ಇಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ನಂದಿಬೆಟ್ಟದ ವೀಕ್ಷಣೆಗೆ ಹೋಗುತ್ತಾರೆ. ಆದರೆ ಇದೀಗ ವೀಕ್ಷಣೆಯ ಸಮಯ ಬದಲಾಗಿದೆ.
ನಂದಿಬೆಟ್ಟ ಪ್ರವೇಶ ಸಮಯವನ್ನು ಸರ್ಕಾರ ಬದಲಾಯಿಸಿದೆ. ಈ ಹಿಂದೆ ಬೆಳಗ್ಗೆ 5 ರಿಂದ ಸಂಜೆ 7 ಗಂಟೆವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇನ್ಮುಂದೆ ಬೆಳಗ್ಗೆ 5:30 ರಿಂದ ಸಂಜೆ 6:30ಕ್ಕೆ ಪ್ರವೇಶ ಸಮಯವನ್ನು ಇಳಿಕೆ ಮಾಡಲಾಗಿದೆ. ಡಿಸೆಂಬರ್ ನಿಂದ ಚಳಿಗಾಲ ಹಾಗೂ ಬೇಗ ಸೂರ್ಯಾಸ್ತವಾಗುವುದರಿಂದ ಈ ನಿರ್ಧಾರ ಮಾಡಲಾಗಿದೆ. ನಂದಿಬೆಟ್ಟದ ಪರಿಷ್ಕೃತ ಸಮಯ ನಿಗದಿ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಅವರು ಆದೇಶಿದ್ದಾರೆ.
ನಂದಿಬೆಟ್ಟ ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಇದು ಭಾರತದ ಎರಡನೆಯ ಅತ್ಯಂತ ದೊಡ್ಡ ಬೆಟ್ಟ. ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ.